` ಅರುಣ್ ಸಾಗರ್ ಪುತ್ರ ಮಯ್ ಥಾಯ್ ಚಾಂಪಿಯನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arun sagar's son wins thai muay championship
Arun Sagr's Son wins Thai Muay Championship

ಮಯ್‍ಥಾಯ್ ಕಲೆ ಹೆಸರು ಕೇಳಿದ್ದೀರಾ..? ಅದು ಥೈಲ್ಯಾಂಡ್‍ನ ಸಮರ ಕಲೆ. ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಆ ಆಟ ಆಡ್ತಾರೆ. ಅಪಾಯಕಾರಿ ಕ್ರೀಡೆಯೂ ಹೌದು. ಅಖಾಡದಲ್ಲೇ ಕ್ರೀಡಾಪಟುಗಳು ಜೀವಕ್ಕೆ ಅಪಾಯ ತಂದುಕೊಂಡಿರೋ ಘಟನೆಗಳೂ ನಡೆದಿವೆ. ಅಂಥಾದ್ದರಲ್ಲಿ ಅಂತಾದ್ದೊಂದು ಅದ್ಭುತ ಸಾಹಸ ಕ್ರೀಡೆಯಲ್ಲಿ ಕನ್ನಡಿಗನೊಬ್ಬ ಅದ್ಭುತ ಸಾಹಸ ಮೆರೆದಿದ್ದಾನೆ. ಸೂರ್ಯ ಸಾಗರ್ ಥಾಯ್‍ಲ್ಯಾಂಡ್‍ನ ಮಯ್‍ಥಾಯ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಅಂದಹಾಗೆ ಸೂರ್ಯ ಸಾಗರ್ ಈ ಚಾಂಪಿಯನ್ ಶಿಪ್ ಗೆಲ್ಲುತ್ತಿರುವುದು ಇದು 2ನೇ ಬಾರಿ. ಫೆಬ್ರವರಿ 16ರಂದು ರೋಬೋಕಾಪ್ ವಿರುದ್ಧದದ ಪಂದ್ಯದಲ್ಲಿ ಗೆದ್ದು ಸಾಧನೆ ಮೆರೆದಿದ್ದಾರೆ.

ಮಗನ ಈ ಸಾಧನೆಯನ್ನು ಕನ್ನಡದ ಖ್ಯಾತ ಕಲಾವಿದ, ನಟ, ನಿರ್ದೇಶಕ, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸೂರ್ಯ ಸಾಗರ್‍ಗೆ ಒಲಿಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery