ನೂರಕ್ಕೊಬ್ಬ.. ಸಾವಿರಕ್ಕೊಬ್ಬ.. ಲಕ್ಷಕ್ಕೊಬ್ಬ.. ಅನ್ನೋ ಮಾತು ಕೇಳಿರ್ತೀರಿ. ಕೋಟಿಗೊಬ್ಬ ಅಂತೂ ಬಿಡಿ, ಹೆಸರು ಕೇಳಿದ ತಕ್ಷಣ ವಿಷ್ಣು, ಕಿಚ್ಚ ನೆನಪಾಗ್ತಾರೆ. ಆದರೆ.. ಈ 99 ಲಕ್ಷಕ್ಕೊಬ್ಬ ಅನ್ನೋದಿದ್ಯಲ್ಲ.. ಅದೇ ಡಿಫರೆಂಟ್. ಅಂದಹಾಗೆ ಇದು ಪ್ರಥಮ್ ಅಭಿನಯದ ಹೊಸ ಚಿತ್ರದ ಟೈಟಲ್. ಈ ಟೈಟಲ್ ರಿಲೀಸ್ ಮಾಡಿ ಗುಡ್ ಲಕ್ ಹೇಳಿರೋದು ಅಭಿಷೇಕ್ ಅಂಬರೀಷ್.
ತಮ್ಮ ಹುಟ್ಟುಹಬ್ಬದ ದಿನವೇ 99 ಲಕ್ಷಕ್ಕೊಬ್ಬ ಟೈಟಲ್ ಲಾಂಚ್ ಮಾಡಿದ್ದಾರೆ ಪ್ರಥಮ್. ಕೋಟಿಗೊಬ್ಬ ಅನ್ನೋದೇನಿದ್ರೂ ವಿಷ್ಣು, ಸುದೀಪ್ ಸರ್ ಅಂತಹವರಿಗೆ ಮಾತ್ರ ಹೊಂದುತ್ತೆ. ನಮ್ಮಂತಹವರಿಗಲ್ಲ. ಹೀಗಾಗಿಯೇ ಅವರಿಗಿಂತ ಒಂದು ಲಕ್ಷ ಕಡಿಮೆ ಇರಬೇಕು ಎಂದು ಈ ಟೈಟಲ್ ಓಕೆ ಮಾಡಿದೆ ಎನ್ನುವ ಪ್ರಥಮ್, ಈ ಚಿತ್ರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಥೆಯಿದೆ ಎಂಬ ಮಾಹಿತಿ ಕೊಟ್ಟಿದ್ದಾರೆ.
ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನೀಲೇಶ್ ಈ 99 ಲಕ್ಷಕ್ಕೊಬ್ಬ ಸಿನಿಮಾ ನಿರ್ಮಾಪಕರಾಗಿದ್ದಾರೆ.