` ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಿಎಂಗೆ ಯಶ್ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash requests cm for big studio in bangalore
Yash, CM Yediyurappa

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಶುರುವಾಗಿದೆ. ಕಾರ್ಯಕ್ರಮಕ್ಕೆ ಖುದ್ದು ಮುಖ್ಯಮಂತ್ರಿಗಳಿಂದಲೇ ಚಾಲನೆ ಸಿಕ್ಕಿದೆ. ಫೆ.27ರಿಂದ ಸಿನಿಮಾ ಪ್ರದರ್ಶನ, ಸಂವಾದ, ಚರ್ಚೆಗಳು ನಡೆಯಲಿವೆ. ಉದ್ಘಾಟನಾ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿದ್ದವರು ಸಿಎಂ ಯಡಿಯೂರಪ್ಪ. ಯಶ್, ಜಯಪ್ರದಾ, ಬೋನಿ ಕಪೂರ್, ಸೋನು ನಿಗಂ, ಆದಿತಿ ಪ್ರಭುದೇವ, ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಅಧ್ಯಕ್ಷ ಜೈರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಚಿತ್ರರಂಗದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು ಯಡಿಯೂರಪ್ಪ. ಮಾಹಿತಿ ಪುಸ್ತಕ ಬಿಡುಗಡೆ ಮಾಡಿದ ಯಶ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ `ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಪ್ರತಿಭೆಗಳಿದ್ದಾರೆ. ಆದರೆ ಒಂದೇ ಒಂದು ಒಳ್ಳೆಯ ಸ್ಟುಡಿಯೋ ಇಲ್ಲ. ನೀವು ನಮಗೊಂದು ಒಳ್ಳೆಯ ದೊಡ್ಡ ಸ್ಟುಡಿಯೋ ಕಟ್ಟಿಸಿಕೊಡಿ. ಇಡೀ ಭಾರತೀಯ ಚಿತ್ರರಂಗವನ್ನೇ ಆಳಬಲ್ಲ ಪ್ರತಿಭಾವಂತರು ನಮ್ಮಲ್ಲಿದ್ದಾರೆ. ನಾವು ಬೇರೆ ರಾಜ್ಯಗಳಿಗೆ ಹೋಗಿ ಶೂಟಿಂಗ್ ಮಾಡಬೇಕಾದ ಅನಿವಾರ್ಯತೆ ತಪ್ಪಿಸಿ ಎಂದು ಮನವಿ ಮಾಡಿಕೊಂಡರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery