` ಅಪ್ಪನ ಮ್ಯೂಸಿಕ್ಕು.. ಮಗ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
a unique combination of music in shivarjun
Sadhu Kokila, Surag

ಇಲ್ಲಿ ಅಪ್ಪ ಸಾಧು ಕೋಕಿಲ. ಮಗ ಸುರಾಗ್ ಸಾಧು ಕೋಕಿಲ. ಇವರಿಬ್ಬರೂ ಒಟ್ಟಿಗೇ ಸಂಗೀತ ನೀಡಿರುವ ಚಿತ್ರ ಶಿವಾರ್ಜುನ. ಹೇಳಿ ಕೇಳಿ ಸಾಧುಕೋಕಿಲ ಅವರದು ಸಂಗೀತ ಕುಟುಂಬ. ಈಗ ಆ ಸಂಗೀತ ಕುಟುಂಬದಿಂದ ಅವರ ಪುತ್ರ ಕೂಡ ಗಾಂಧಿನಗರಕ್ಕೆ ಕಾಲಿಟ್ಟಾಗಿದೆ. ಈಗಾಗಲೇ ಅತಿರಥ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದ ಸುರಾಗ್, ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅಪ್ಪ-ಮಗನ ಜುಗಲ್ ಬಂದಿ ಈ ಚಿತ್ರದ ಪ್ರಮುಖ ಆಕರ್ಷಣೆ.

ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಸಿನಿಮಾ ಶಿವಾರ್ಜುನ. ಚಿರಂಜೀವಿ ಸರ್ಜಾ ಜೊತೆ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ಸಾಧುಕೋಕಿಲ,  ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರು ನಟಿಸಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಗಮನ ಸೆಳೆದಿದ್ದ ಶಿವತೇಜಸ್ ಈ ಚಿತ್ರಕ್ಕೆ ನಿರ್ದೇಶಕ.

Shivarjun Movie Gallery

KFCC 75Years Celebrations and Logo Launch Gallery