` ಜಗ್ಗೇಶ್ ಅವರದ್ದು ಮಾತಂದ್ರೆ ಮಾತು.. ಆ ಹೆಣ್ಮಕ್ಳಿಗೆ ಮನೆ ರೆಡಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh stands by his words again
Jaggesh

ನವರಸನಾಯಕ ಜಗ್ಗೇಶ್ ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡಿದ್ದಾರೆ. ಸರಿಗಮಪ ಸೀಜನ್ 17ರಲ್ಲಿ ಸ್ಪರ್ಧಿಗಳಾಗಿದ್ದ ಅಂಧ ಸೋದರಿಯರಿಗೆ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದರು. ಆ ಕೆಲಸ ಪೂರ್ತಿಯಾಗಿದೆ. ಗೃಹ ಪ್ರವೇಶಕ್ಕೆ ದಿನವೂ ಫಿಕ್ಸ್ ಆಗಿದೆ. ಮಾರ್ಚ್ 12ಕ್ಕೆ ಗೃಹ ಪ್ರವೇಶ.

ರತ್ನಮ್ಮ ಮತ್ತು ಮಂಜಮ್ಮ ಎಂಬ ಆ ಇಬ್ಬರು ಸೋದರಿಯರ ಮನೆ ಗೃಹ ಪ್ರವೇಶಕ್ಕೆ ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಹೋಗುತ್ತಿದ್ದಾರೆ. ಕೊರಟಗೆರೆಯ ಜಗ್ಗೇಶ್ ಅಭಿಮಾನಿ ಸಂಘದ ಮೂಲಕ ಮನೆ ಕಟ್ಟಿಸಿಕೊಡಲಾಗಿದ್ದು, ಜಗ್ಗೇಶ್ ಅವರೇ ಮನೆಯ ಕೀಲಿ ಕೈ ಹಸ್ತಾಂತರ ಮಾಡಲಿದ್ದಾರೆ.

ಈ ಕೆಲಸ ಮಾಡಿದ್ದಕ್ಕಾಗಿ ತಮ್ಮ ಅಭಿಮಾನಿ ಸಂಘದ ರವಿ, ಮಲ್ಲಣ್ಣ ಮತ್ತು ಮಿತ್ರರಿಗೆ ಧನ್ಯವಾದಗಳು. ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ..Love you all ಎಂದು ಧನ್ಯವಾದ ತಿಳಿಸಿದ್ದಾರೆ ಜಗ್ಗೇಶ್. ಜಗ್ಗೇಶ್ ಅವರಷ್ಟೇ ಅಲ್ಲ, ಅರ್ಜುನ್ ಜನ್ಯ ಕೂಡಾ ನುಡಿದಂತೆ ನಡೆದುಕೊಂಡಿದ್ದು, ಮೊದಲ ತಿಂಗಳ ದಿನಸಿಯನ್ನು ಪೂರೈಸಿದ್ದಾರೆ ಅರ್ಜುನ್. ಆ ಸೋದರಿಯರಿಗೆ ಜೀವನವಿಡೀ ಸ್ವತಃ ತಮ್ಮ ಹಣದಲ್ಲಿಯೇ ಧವಸ ಧಾನ್ಯ ಪೂರೈಸುವ ಹೊಣೆ ಹೊತ್ತಿದ್ದಾರೆ ಅರ್ಜುನ್ ಜನ್ಯ.

Shivarjun Movie Gallery

KFCC 75Years Celebrations and Logo Launch Gallery