` ಸೈಲೆಂಟ್ ಹೀರೋ ಜೊತೆ ತರ್ಲೆ ನಾಯಿಯ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
silent hero's journey with hyper active dog is charlie 777
Charlie 777 Movie Image

ಹೀರೋ ಏಕಾಂಗಿ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಮುಂಗೋಪಿ. ಯಾರೊಬ್ಬರ ಜೊತೆಗೂ ಬೆರೆಯದವನು. ಅಂತವನ ಜೊತೆ ಒಂದು ತರಲೆ ನಾಯಿ. ಆತನ ಹೆಸರು ಚಾರ್ಲಿ. ಹೈಪರ್‌ ಆಕ್ಟಿವ್‌. ಅಲ್ಲೆಲ್ಲೋ ತಪ್ಪಿಸಿಕೊಂಡ ನಾಯಿ, ಏಕಾಂಗಿ ನಾಯಕನ ಜಗತ್ತಿಗೆ ಎಂಟ್ರಿ ಕೊಡುತ್ತೆ. ನಾಯಕನ ಲೈಫು ಕಂಪ್ಲೀಟ್ ಚೇಂಜ್ ಆಗ್ಬಿಡುತ್ತೆ. ಹೇಗೆ ಚೇಂಜ್ ಆಗುತ್ತೆ.. ಅದೇ 777 ಚಾರ್ಲಿ ಚಿತ್ರದ ಕಥೆ.

ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ರಕ್ಷಿತ್‌ ಶೆಟ್ಟಿ ನಟಿಸುತ್ತಿರುವ 777 ಚಾರ್ಲಿ, ಈ ಕಾರಣಕ್ಕೇ ಕುತೂಹಲ ಹುಟ್ಟಿಸಿದೆ. ಕಿರಣ್‌ರಾಜ್‌ ನಿರ್ದೇಶನ ಚಿತ್ರಕ್ಕೆ ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವ ಚಿತ್ರವಿದು.

ಈಗಾಗಲೇ, ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಮುಂದಿನ ಶೂಟಿಂಗ್ನ್ನು ಶಿಮ್ಲಾ, ಕಾಶ್ಮೀರ, ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ಪ್ಲಾನ್ ಮಾಡಿದೆ. ರಕ್ಷಿತ್‌ ಶೆಟ್ಟಿ ಎದುರು ಸಂಗೀತ ನಾಯಕಿಯಾಗಿದ್ದಾರೆ. ಅಂದಹಾಗೆ ಅಲ್ಲಿಗೆ ಈ ತರ್ಲೆ ಚಾರ್ಲಿಯನ್ನೂ ಕರೆದುಕೊಂಡು ಹೋಗಬೇಕು. 15 ದಿನಗಳ ಶೂಟಿಂಗ್ ಇದೆ.

ಇದು ಕೂಡಾ ಪ್ಯಾನ್‌ ಇಂಡಿಯಾ ಕಾನ್ಟೆಪ್ಟ್‌ ಇಟ್ಟುಕೊಂಡೇ ತಯಾರಾಗುತ್ತಿರುವ ಸಿನಿಮಾ. ಇನ್ನೆರಡು ತಿಂಗಳ ನಂತರ ಶೂಟಿಂಗ್ ಮುಗಿಯಲಿದೆ. 20 ನಿಮಿಷದ ಗ್ರಾಫಿಕ್ಸ್ ಬೇಕಿದೆ. ಹೀಗಾಗಿ ಶೂಟಿಂಗ್ ಮುಗಿದ ಮೇಲೆಯೇ ರಿಲೀಸ್ ಡೇಟ್ ಹೇಳ್ತೇವೆ ಅಂತಾರೆ ನಿರ್ದೇಶಕ ಕಿರಣ್ ರಾಜ್.

ನಟ ರಾಜ್‌ ಬಿ. ಶೆಟ್ಟಿ ಚಿತ್ರದ ಇನ್ನೊಂದು ಮುಖ್ಯ ಪಾತ್ರದಲ್ಲಿದ್ದಾರೆ. ನೊಬಿಲ್‌ ‍ಪಾಲ್‌ ಸಂಗೀತ ನೀಡಿದ್ದಾರೆ.