ಕೆಜಿಎಫ್ ಕಥೆಯ ಸೂತ್ರಧಾರ ಆನಂದ್ ಇಂಗಳಗಿ. ಪತ್ರಕರ್ತ. ಇನ್ನೊಬ್ಬ ಟಿವಿ ಚಾನೆಲ್ ಪತ್ರಕರ್ತೆ ದೀಪಾ ಹೆಗ್ಡೆ ಅಲಿಯಾಸ್ ಮಾಳವಿಕಾ ಅವಿನಾಶ್ ಎದುರು ರಾಕಿಭಾಯ್ ಕಥೆ ಹೇಳ್ತಾರೆ. ಅನಂತ್ ನಾಗ್ ವಾಯ್ಸ್ ಕೆಜಿಎಫ್ ಚಾಪ್ಟರ್ 1ನ ಹೈಲೈಟ್ಸ್‍ಗಳಲ್ಲಿ ಒಂದು. ಇಂತಹ ಅನಂತ್ ನಾಗ್ ಚಾಪ್ಟರ್ 2ನಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿಯಿದೆ. ಇದು ನಿಜಾನಾ..? ಹೊಂಬಾಳೆ ಫಿಲಂಸ್, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸೇರಿದಂತೆ ಯಾರೊಬ್ಬರೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಅತ್ತ ಅನಂತ್ ನಾಗ್ ಅವರ ಕಡೆಯಿಂದಲೂ ಸ್ಪಷ್ಟನೆ ಬಂದಿಲ್ಲ.
ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಸೆನ್ಸೇಷನ್ ಸೃಷ್ಟಿಸಿರುವುದು ಸತ್ಯ. ಸುದ್ದಿ ಸತ್ಯವೇ ಆಗಿದ್ದರೆ, ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2ಗೆ ಇದು ಶಾಕಿಂಗ್.