` ಮದಕರಿಯಲ್ಲಿ ವಿಷ್ಣುವರ್ಧನ್ ಹುಡುಕಾಡಿದ ಎಸ್‍ವಿಆರ್ ಬಾಬು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rajendra singh babu in rajasthan
Rajendra Singh Babu, Dr Vishnuvardhan

ಅದೇ ಹೋಟೆಲ್.. 30 ವರ್ಷಗಳ ಹಿಂದೆ ಉಳಿದುಕೊಂಡಿದ್ದ ಹೋಟೆಲ್. ಆ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾಗ ಅವರ ಜೊತೆಯಿದ್ದವರು ವಿಷ್ಣುವರ್ಧನ್ ಮತ್ತು ಸುಹಾಸಿನಿ. ಅದು ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದಾದ ಮುತ್ತಿನ ಹಾರ ಚಿತ್ರದ ಶೂಟಿಂಗ್‍ಗಾಗಿ. ಅದೆಲ್ಲವನ್ನೂ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 30 ವರ್ಷಗಳ ನಂತರ. ಅದಕ್ಕೆ ಕಾರಣ ರಾಜವೀರ ಮದಕರಿ ನಾಯಕ.

ರಾಜವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಶುರುವಾಗಿದೆ. ಕೇರಳದಲ್ಲಿ ಕೆಲವು ದಿನ ಶೂಟಿಂಗ್ ಮಾಡಿ ಬ್ರೇಕ್ ತೆಗೆದುಕೊಂಡಿದೆ. ಈಗ ಅರಮನೆ, ಕೋಟೆ ಕೊತ್ತಲಗಳ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕುತ್ತಿದ್ದಾರೆ ಸಿಂಗ್ ಬಾಬು.

ದರ್ಶನ್ ಮದಕರಿಯಾಯಗಿ, ಸುಮಲತಾ ರಾಜಮಾತೆಯಾಗಿ ನಟಿಸುತ್ತಿರುವ ದುರ್ಗದ ಇತಿಹಾಸದ ಕಥೆ ರಾಜವೀರ ಮದಕರಿ ನಾಯಕನದ್ದು. ಬಿ.ಎಲ್.ವೇಣು ಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ ಹಂಸಲೇಖ ಸಂಗೀತವಿದೆ. ಚಿತ್ರಕ್ಕೆ ಬೆನ್ನೆಲುಬಾಗಿರುವುದು ರಾಕ್‍ಲೈನ್ ವೆಂಕಟೇಶ್.

Shivarjun Movie Gallery

KFCC 75Years Celebrations and Logo Launch Gallery