` ರಾಮಾ ರಾಮಾ ರೇ ಸತ್ಯ ಜೊತೆ ಧನಂಜಯ್ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhanajay's next with sirector satyaprakash
Dhanajay, Satyapakash

ಡಾಲಿ ಧನಂಜಯ್, ಈಗ ಮಂಕಿ ಸೀನನಾಗಿ ಗೆದ್ದಿದ್ದಾರೆ. ಈ ಗೆಲುವಿನ ನಡುವೆಯೇ ಅವರೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಜಯನಗರ 4 ಬ್ಲಾಕ್. ಇದು ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ಜೊತೆಗಿನ ಸಿನಿಮಾ.

ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಮತ್ತು ಧನಂಜಯ್ ಇಬ್ಬರೂ ಬಂಡವಾಳ ಹೂಡುತ್ತಿರುವುದು ವಿಶೇಷ. ಆದರೆ ಡೈರೆಕ್ಟರ್ ಸತ್ಯಪ್ರಕಾಶ್ ಅಲ್ಲ. ಹೌದು ಡಾಲಿ ಪಿಕ್ಚರ್ಸ್ ಮತ್ತು ಸತ್ಯ ಪಿಕ್ಚರ್ಸ್ ಮೂಲಕ ನಿರ್ಮಾಣವಾಗುವ ಈ ಚಿತ್ರಕ್ಕೆ ಇಬ್ಬರಿಗೂ ಗೊತ್ತಿರುವ ಒಬ್ಬರು ನಿರ್ದೇಶಕರಾಗಲಿದ್ದಾರೆ.

ಸತ್ಯ ಪ್ರಕಾಶ್ ಮತ್ತು ಧನಂಜಯ್, ಚಿತ್ರರಂಗಕ್ಕೆ ಬಂದಾಗಿನಿಂದಲೂ ಗೆಳೆಯರೇ. ಮೊದಲೊಂದು ಕಿರುಚಿತ್ರ ಮಾಡಿದ್ದರು. ನಮ್ಮಿಬ್ಬರ  ಜೊತೆ ಕೆಲಸ ಮಾಡಿದ ಟೀಂನವರೇ ಈ ಹೊಸ ಸಿನಿಮಾ ಡೈರೆಕ್ಟರ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಸತ್ಯ ಪ್ರಕಾಶ್.

 

Shivarjun Movie Gallery

KFCC 75Years Celebrations and Logo Launch Gallery