` ಶಿವಾಜಿ ದಿಗ್ವಿಜಯ : ಸಕ್ಸಸ್ ಸ್ಟೋರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivaji suratkal running successfully
Shivaji Suratkal Movie Image

ರಮೇಶ್ ಅರವಿಂದ್ ನಟಿಸಿರುವ 101ನೇ ಸಿನಿಮಾ ಶಿವಾಜಿ ಸುರತ್ಕಲ್. ಕನ್ನಡದ ಶೆರ್ಲಾಕ್ ಹೋಮ್ಸ್ ಅವತಾರದಲ್ಲಿ ಬಂದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ. ಅದು ಸಾಬೀತಾಗಿರುವುದು ಥಿಯೇಟರು ಮತ್ತು ಶೋಗಳ ಸಂಖ್ಯೆಯಲ್ಲಿ. ಬೆಂಗಳೂರಿನಲ್ಲಿ ರಿಲೀಸ್ ದಿನ ಕೇವಲ 90+ ಶೋಗಳಷ್ಟೇ ಇದ್ದ ಸಿನಿಮಾ, 2ನೇ ದಿನ.. 3ನೇ ದಿನ.. ಶೋಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಶೋಗಳ ಸಂಖ್ಯೆ ಹೆಚ್ಚೂ ಕಡಿಮೆ 150ನ್ನು ಸಮೀಪಿಸಿದೆ. ಕಾರಣ ಇಷ್ಟೆ.. ಶಿವಾಜಿ ಸುರತ್ಕಲ್ ನೋಡುವವರ, ನೋಡಲು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.

ಈಗ ಗೆದ್ದಿರುವುದು ನಿರ್ದೇಶಕ ಆಕಾಶ್ ಶ್ರೀವತ್ಸ್ ಮತ್ತು ರಮೇಶ್ ಅರವಿಂದ್. ಕಾಸು ಕೊಟ್ಟು ಥಿಯೇಟರಿಗೆ ಬರುವ ಪ್ರೇಕ್ಷಕ, ಸಿನಿಮಾ ಶುರುವಾದಾಗಿನಿಂದ ಮುಗಿಯುವವರೆಗೆ ಸೀಟಿನ ತುದಿಯಲ್ಲಿಯೇ ಕುಳಿತಿರುತ್ತಾನೆ ಎನ್ನುವುದು ನಿರ್ದೇಶಕರು ಮತ್ತು ಚಿತ್ರಕಥೆಗೆ ಸಿಗುತ್ತಿರೋ ಬಹುಮಾನ. ಅಫ್‍ಕೋರ್ಸ್... ಇದು ಬಾಕ್ಸಾಫೀಸ್‍ನಲ್ಲೂ ವಂಡರ್ ತೋರಿಸಿದೆ.

Shivarjun Movie Gallery

Actor Bullet Prakash Movie Gallery