` ಥರ್ಡ್ ಕ್ಲಾಸ್ ಸಕ್ಸಸ್ : NEXT ಜೋಪಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
3rd class movie running successfully
3rd Class Movie Image

ಥರ್ಡ್ ಕ್ಲಾಸ್, ಹೆಸರಿನ ಕಾರಣಕ್ಕೇ ವಿಸ್ಮಯ ಮೂಡಿಸಿದ್ದ ಸಿನಿಮಾ. ಯಾರಾದರೂ ಇಂತಹ ಟೈಟಲ್ ಸಿನಿಮಾಗೆ ಇಡ್ತಾರಾ ಅನ್ನೋ ಪ್ರಶ್ನೆ ಹಾಕಿದ್ದ ಚಿತ್ರವಿದು. ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಸಕ್ಸಸ್ ಆಗಿದೆ.

ರಿಲೀಸ್ ಆಗಿದ್ದು 100+ ಥಿಯೇಟರುಗಳಲ್ಲಿ. ಈಗ ಚಿತ್ರಮಂದಿರಗಳ ಸಂಖ್ಯೆ 35ಕ್ಕೆ ಇಳಿದಿದೆ. 2ನೇ ವಾರ ಪೂರೈಸಿರುವ ಚಿತ್ರ ಸಕ್ಸಸ್ ಎಂದು ಘೋಷಿಸಿಕೊಂಡಿದೆ ಥರ್ಡ್ ಕ್ಲಾಸ್ ಚಿತ್ರತಂಡ.  ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ ಬಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ಅಶೋಕ್.

ಚಿತ್ರದ ಹೀರೋ ಕಮ್ ನಿರ್ಮಾಪಕ ಜಗದೀಶ್ ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಜೋಪಾನ ಎಂಬ ಹೆಸರಿನ ಹೊಸ ಚಿತ್ರ ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರಂತೆ.

ಚಿತ್ರದ ನಾಯಕಿ ನಟಿ ರೂಪಿಕಾಗೂ ಚಿತ್ರದ ಗೆಲುವು ಖುಷಿ ಕೊಟ್ಟಿದೆ. ಚೆಲುವಿನ ಚಿಲಿಪಿಲಿ ನಂತರ ಗೆದ್ದ ಚಿತ್ರವಿದು ಎನ್ನುವುದೇ ನನಗೆ ಖುಷಿ. ಚಿತ್ರ ನೋಡಿದವರು ನನಗೆ ಮೆಸೇಜ್ ಮಾಡಿ ಚೆನ್ನಾಗಿ ನಟಿಸಿದ್ದೀರಾ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಅಂತಾರೆ ರೂಪಿಕಾ.

ಚಿತ್ರ ಬಿಡುಗಡೆಗೂ ಮುನ್ನ ಬಾದಾಮಿ ತಾಲೂಕಿನ ಊರೊಂದನ್ನು ದತ್ತು ಪಡೆದು, ಟ್ಯಾಕ್ಸಿ, ಆಟೋ ಚಾಲಕರಿಗೆ ವಿಮೆ ಮಾಡಿಸಿ ಜನಮೆಚ್ಚುವ ಕೆಲಸ ಮಾಡಿದ್ದ ಚಿತ್ರತಂಡ, ವಿಶೇಷ ರೀತಿಯಲ್ಲಿ ಸಮಾಜಸೇವೆಯ ಮೂಲಕ ಪ್ರಚಾರ ಮಾಡಿತ್ತು. ಈಗ ಚಿತ್ರವೂ ಗೆದ್ದು, ಚಿತ್ರತಂಡದ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಖುಷಿಯಾಗಿದೆ.