ಶಿವಾರ್ಜುನ, ಚಿರಂಜೀವಿ ಸರ್ಜಾ ಅಭಿನಯದ ಹೊಸ ಸಿನಿಮಾ. ಈ ಚಿತ್ರಕ್ಕೆ ನಿರ್ಮಾಪಕ ಶಿವಾರ್ಜುನ್ ಮತ್ತು ಮಂಜುಳಾ ಶಿವಾರ್ಜುನ್. ನಿರ್ಮಾಪಕರ ಹೆಸರೇ ಚಿತ್ರದ ಟೈಟಲ್ ಎನ್ನುವುದು ವಿಶೇಷ. ಅರ್ಜುನ್ ಸರ್ಜಾ ಅವರ ಜೊತೆಯಲ್ಲಿಯೇ ಇದ್ದ, ನಿರ್ಮಾಣ ನಿರ್ವಾಹಕರಾಗಿ ಕೆಲಸ ಮಾಡಿ ಅನುಭವ ಇರುವ ಶಿವಾರ್ಜುನ್, ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.
ಚಿರಂಜೀವಿ ಸರ್ಜಾ ಜೊತೆ ಮೂವರು ನಾಯಕಿಯರಿದ್ದಾರೆ. ಅಕ್ಷತಾ, ಅಕ್ಷಿತಾ ಮತ್ತು ಅಮೃತಾ. ತಾರಾ, ಸಾಧುಕೋಕಿಲ, ಕಿಶೋರ್, ನಯನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಶಿವತೇಜಸ್ ನಿರ್ದೇಶನದ ಚಿತ್ರಕ್ಕೆ ಸಾಧುಕೋಕಿಲ ಪುತ್ರ ಸುರಾಗ್ ಕೋಕಿಲ ಸಂಗೀತ ನೀಡಿದ್ದಾರೆ.
ಚಿತ್ರದ ಟ್ರೇಲರ್ನ್ನು ಧ್ರುವ ಸರ್ಜಾ ರಿಲೀಸ್ ಮಾಡಿ, ಅಣ್ಣನ ಚಿತ್ರಕ್ಕೆ ಶುಭ ಕೋರಿದ್ದಾರೆ.