` ಅಶ್ವಿನಿ ರಾಮ್ ಪ್ರಸಾದ್ ಪುತ್ರ ಚಿತ್ರರಂಗಕ್ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arum ramprasad tp debut in sandalwood
Arun RamPrasad

ಅಶ್ವಿನಿ ರಾಮ್ ಪ್ರಸಾದ್. ಅಶ್ವಿನಿ ಆಡಿಯೋ ಕಂಪೆನಿಯ ಸೂತ್ರಧಾರ. ಜೋಗಿಯಂತ ಹಿಟ್ ಸಿನಿಮಾ ಕೊಟ್ಟಿದ್ದ ಅಶ್ವಿನಿ ರಾಮ್ ಪ್ರಸಾದ್, ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ. ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಘಾರ್ಗಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ನನ್ನ ಮಗ ಕಲಾವಿದನಾಗಿ ಚಿತ್ರರಂಗದಲ್ಲಿ ಬೆಳೆಯಬೇಕು ಎನ್ನುವುದು ನನ್ನ ಆಸೆ. ಈ ಚಿತ್ರದಲ್ಲಿ ಅವನನ್ನು ಒಬ್ಬ ಕಲಾವಿದನಾಗಿ ಲಾಂಚ್ ಮಾಡುತ್ತಿದ್ದೇವೆ. ಅವನು ಹೀರೋ ಎನ್ನುವುದಕ್ಕಿಂತ ಒಬ್ಬ ಒಳ್ಳೆಯ ಕಲಾವಿದನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಆಸೆ ತೋಡಿಕೊಂಡಿದ್ದಾರೆ ರಾಮ್ ಪ್ರಸಾದ್.

ಘಾರ್ಗಾ ಚಿತ್ರಕ್ಕೆ ಶಶಿಧರ್ ನಿರ್ದೇಶಕರಾಗಿದ್ದು, ಚಿತ್ರದಲ್ಲಿ ಅರುಣ್ ಕಾದಂಬರಿಕಾರನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರೈಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಾಘವಿ ನಾಯಕಿಯಾಗಿದ್ದು, ಸಾಯಿಕುಮಾರ್, ಅರುಣ್ ಸಾಗರ್, ದೇವ್‍ಗಿಲ್, ರಾಹುಲ್ ದೇವ್ ಮೊದಲಾದ ಘಟಾನುಘಟಿಗಳ ತಂಡವೇ ಚಿತ್ರದಲ್ಲಿದೆ.

Shivarjun Movie Gallery

KFCC 75Years Celebrations and Logo Launch Gallery