` ಗರ್ಭಿಣಿಯಾಗದೇ ಅಮ್ಮನಾದ ಶಿಲ್ಪಾ ಶೆಟ್ಟಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shilpa shetty image
shilpa shetty

ಶಿಲ್ಪಾ ಶೆಟ್ಟಿ ಮತ್ತೆ ಅಮ್ಮನಾಗಿದ್ದಾರೆ. 2ನೇ ಮಗುವಿಗೆ ತಾಯಿಯಾಗಿದ್ದಾರೆ. ಈ ಬಾರಿ ಅವರಿಗೆ ಹೆಣ್ಣು ಮಗು. ಅರೆ.. ಗರ್ಭಿಣಿಯಾದ ಸುದ್ದಿಯೇ ಇರಲಿಲ್ವಲ್ಲಾ ಎನ್ನಬೇಡಿ. ಅವರು ತಾಯಿಯಾಗಿರುವುದು ಸತ್ಯ.

ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಂಪತಿ ಮಡಿಲಿಗೆ ಈಗ ಹೆಣ್ಣು ಮಗು ಬಂದಿದೆ. 2009ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಈಗಾಗಲೇ ವಿಯಾನ್ ಎಂಬ  8 ವರ್ಷದ ಮಗನಿದ್ದಾನೆ.

`ನಮ್ಮ ಪ್ರಾರ್ಥನೆಗೆ ಅಚ್ಚರಿ ರೀತಿಯ ಫಲ ಸಿಕ್ಕಿದೆ. ಮನೆಗೆ ಮುದ್ದು ದೇವತೆ ಸಮಿಶಾ ಶೆಟ್ಟಿ ಕುಂದ್ರಾ ಆಗಮನವಾಗಿರುವ ವಿಷಯವನ್ನು ನಿಮ್ಮೆಲ್ಲರ ಜತೆಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಫೆ.15, 2020ಕ್ಕೆ ಜೂನಿಯರ್ ಶಿಲ್ಪಾ ಶೆಟ್ಟಿ ನಮ್ಮ ಮನೆಗೆ ಬಂದಿದ್ದಾಳೆ' ಎಂದಿರುವ ಶಿಲ್ಪಾ ಶೆಟ್ಟಿ, ಮಗುವಿನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಅಂದಹಾಗೆ ಸಮಿಶಾ ಅಂದ್ರೆ ಸಂಸ್ಕೃತದಲ್ಲಿ `ಸ' ಎಂದರೆ ಪಡೆದುಕೊಳ್ಳುವುದು ಎಂದರ್ಥ. ರಷ್ಯನ್ ಭಾಷೆಯಲ್ಲಿ `ಮಿಶಾ' ಎಂದರೆ ದೇವರ ರೂಪ. ಲಕ್ಷ್ಮೀಯ ಅವತಾರ' ಎಂದರ್ಥವಂತೆ. ವಿಶೇಷ ಅಂದ್ರೆ ಈ ಮಗುವನ್ನು ಅವರು ಪಡೆದಿರುವುದು ಬಾಡಿಗೆ ತಾಯ್ತನದ ಮೂಲಕ. ಹೀಗಾಗಿ ಎಲ್ಲರಿಗೂ ಅಚ್ಚರಿಯಾಗಿದೆ.. ಅಷ್ಟೆ..

Shivarjun Movie Gallery

KFCC 75Years Celebrations and Logo Launch Gallery