` ಸರ್ ಅರ್ಥರ್ ಕಾನನ್ ಡಾಯ್ಲ್ ಅವನು.. ಅಕಾಶ್ ಶ್ರೀವತ್ಸ ಇವನು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivaji suratkal specialty
Shivaji Suratkal Movie Image

ಸರ್ ಆರ್ಥರ್‌ ಕೊನಾನ್ ಡಾಯ್ಲ್, ಇಂಗ್ಲಿಷ್ ಕಾದಂಬರಿ ಲೋಕದ ವಿಶಿಷ್ಟ ಹೆಸರು. ಶೆರ್ಲಾಕ್ ಹೋಮ್ಸ್ ಪಾತ್ರದ ಸೃಷ್ಟಿಕರ್ತ. ಪತ್ತೇದಾರನಾದವನು ಹೀಗೆಯೇ ಇರಬೇಕು ಎಂಬ ಕಲ್ಪನೆಗೆ ಕಸುವು ತುಂಬಿದ ಕಥೆಗಾರ. ಕನ್ನಡದಲ್ಲಿ ಶೆರ್ಲಾಕ್ ಹೋಮ್ಸ್ ಮಾದರಿಯ ಹಲವು ಕಥೆಗಾರರು ಬಂದಿದ್ದಾರೆ. ಆದರೆ.. ಅದೇಕೋ ಏನೋ.. ಆ ಮಾದರಿಯ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಿದವರಿರಲಿಲ್ಲ. ಅಂಥಾದ್ದೊಂದು ಕಥೆಯ ಬರಕ್ಕೆ ಫುಲ್ ಸ್ಟಾಪ್ ಇಟ್ಟಿರುವುದು ಆಕಾಶ್ ಶ್ರೀವತ್ಸ.

ಶಿವಾಜಿ ಸುರತ್ಕಲ್ ಸಿನಮಾದ ನಿರ್ದೇಶಕ ಇವರೇ. ಗೆಳೆಯ ಅಭಿಷೇಕ್ ಜೊತೆಗೂಡಿ ರಚಿಸಿದ ಕಥೆಗೆ ಶಕ್ತಿ ತುಂಬಿರುವುದು ರಮೇಶ್ ಅರವಿಂದ್. ಒಂದರ್ಥದಲ್ಲಿ ರಮೇಶ್, ಕನ್ನಡದ ಶೆರ್ಲಾಕ್ ಹೋಮ್ಸ್ ಎನ್ನಬಹುದು. 100 ಕೇಸುಗಳನ್ನು ಯಶಸ್ವಿಯಾಗಿ ಪೂರೈಸಿರುವ ಶಿವಾಜಿಗೆ ಸಿಗುವ 101ನೇ ಕೇಸ್ ಕಥೆಯೇ ಈ ಸಿನಿಮಾ.

ಈ ಚಿತ್ರದ ಸ್ಪೆಷಾಲಿಟಿ ಎಂದರೆ, ಸಿನಿಮಾ ನೋಡುವ ಪ್ರೇಕ್ಷಕ ಕಣ್ಣು, ಕಿವಿಯ ಜೊತೆ ಮೆದುಳಿಗೂ ಕೆಲಸ ಕೊಡಬೇಕು. ಸಿನಿಮಾ ನೋಡುತ್ತಾ ನೋಡುತ್ತಾ ಸ್ವತಃ ಪತ್ತೇದಾರನಾಗಬೇಕು. ಕೊಲೆಯ ರಹಸ್ಯ ಭೇದಿಸುವುದು ಕೇವಲ ಹೀರೋ ಕೆಲಸ ಅಲ್ಲ, ಪ್ರೇಕ್ಷಕನ ಕೆಲಸವೂ ಹೌದು. ಅಷ್ಟರಮಟ್ಟಿಗೆ ಪ್ರೇಕ್ಷಕರನ್ನು ಇನ್ವಾಲ್ವ್ ಮಾಡಿಕೊಳ್ಳುತ್ತೆ ಈ ಸಿನಿಮಾ ಎನ್ನುತ್ತಾರೆ ರಮೇಶ್ ಅರವಿಂದ್. ಸಿನಿಮಾ ಈಗಾಗಲೇ ಥಿಯೇಟರಿನಲ್ಲಿದೆ. ಥ್ರಿಲ್ ಬೇಕು ಎನ್ನುವವರಿಗೆ ಖಂಡಿತಾ ಈ ಸಿನಿಮಾ ಡಬ್ಬಲ್.. ತ್ರಿಬ್ಬಲ್.. ಥ್ರಿಲ್ ಕೊಡಲಿದೆ.