` ಜಗ್ಗೇಶ್ ಒಂದು ಕರೆಗೆ ದರ್ಶನ್ ಕೊಟ್ಟರು 1 ಲಕ್ಷ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan comes forward to support of killer venkatesh
Jaggesh, Killer Venkatesh, Darshan

ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಗೂ ಹಣವಿಲ್ಲದೆ ಆಸ್ಪತ್ರೆಯಲ್ಲಿರುವುದು ಗೊತ್ತಿದೆಯಷ್ಟೆ. ಗೆಳೆಯನ ಚಿಕಿತ್ಸೆಗೆ ನಟ ಜಗ್ಗೇಶ್ ಟೊಂಕ ಕಟ್ಟಿ ನಿಂತಿದ್ದಾರೆ. ಸ್ವತಃ ಆಸ್ಪತ್ರೆಯಲ್ಲಿದ್ದುಕೊಂಡು ಗೆಳೆಯನನ್ನು ಗುಣಮುಖನನ್ನಾಗಿಸಲು ಹೋರಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಕೆಲವರ ನೆರವನ್ನೂ ಕೇಳಿದ್ದಾರೆ.

ಜಗ್ಗೇಶ್ ಅವರು ಫೋನ್ ಮಾಡಿ ವಿಷಯ ತಿಳಿಸಿದ ಒಂದೇ ಒಂದು ಗಂಟೆಯಲ್ಲಿ ದರ್ಶನ್ 1 ಲಕ್ಷ ರೂ. ಕಳಿಸಿಕೊಟ್ಟಿದ್ದಾರೆ. ಇದನ್ನು ಜಗ್ಗೇಶ್ ಪ್ರೀತಿಯಿಂದಲೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಸಚಿವ ಶ್ರೀರಾಮುಲು ಕೂಡಾ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ಇದೆಲ್ಲದರ ಜೊತೆಗೆ ಜಗ್ಗೇಶ್ ಕಿಲ್ಲರ್ ವೆಂಕಟೇಶ್ ಅವರ ಪತ್ನಿ ಪದ್ಮಾವತಿ ಅವರ ಅಕೌಂಟ್ ನಂಬರ್‍ನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ದಾನಿಗಳು ನೆರವು ನೀಡುವಂತೆ ಕೋರಿದ್ದಾರೆ.

Shivarjun Movie Gallery

Actor Bullet Prakash Movie Gallery