` ಚೀಟಿಂಗ್ ಕೇಸ್ : ಸಿನಿಮಾ ಹೀರೋ ಅರೆಸ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
cheating case, film hero arrested
Anand Reddy

ಈತನ ಹೆಸರು ಆನಂದ ರೆಡ್ಡಿ. ಕಾಫಿ ಕಟ್ಟೆ ಅನ್ನೋ ಚಿತ್ರದ ಹೀರೋ ಆಗಿದ್ದ ನಟ. 30ಕ್ಕೂ ಹೆಚ್ಚು ಕಲಾವಿದರನ್ನು ಒಟ್ಟುಗೂಡಿಸಿ ನಿರ್ಮಿಸಿದ್ದ ಚಿತ್ರವದು. ಆ ಚಿತ್ರಕ್ಕೆ ಹೀರೋ ಆಗಿದ್ದ ನಟ ಅನಂದ ರೆಡ್ಡಿ ಈಗ ಅರೆಸ್ಟ್ ಆಗಿ ಜೈಲು ಪಾಲಾಗಿದ್ದಾನೆ.

ಇಷ್ಟಕ್ಕೂ ಈತ ಮಾಡಿರುವ ಕ್ರೈಂ ಏನು ಗೊತ್ತಾ..? ಎಟಿಎಂಗೆ ಹಾಕಬೇಕಿದ್ದ ಹಣವನ್ನು ಲಪಟಾಯಿಸಿರುವುದು. ಎಟಿಎಂಗಳಿಗೆ ಹಣ ತುಂಬುವ ಕಂಪೆನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿದ್ದ. ಆದರೆ ಂಪೆನಿ ನೀಡುತ್ತಿದ್ದ ಹಣದಲ್ಲಿ ಅರ್ಧವನ್ನಷ್ಟೇ ಎಟಿಎಂಗೆ ಹಾಕಿ, ಉಳಿದದ್ದನ್ನು ಜೇಬಿಗೆ ಇಳಿಸುತ್ತಿದ್ದ. ಇದೇ ರೀತಿ ಆನಂದ್ ರೆಡ್ಡಿ 1 ಕೋಟಿ 60 ಲಕ್ಷ ಎಗರಿಸಿದ್ದ. ಕಂಪೆನಿ ವಿಚಾರಣೆ ಮಾಡಿ ತನಿಖೆ ಮಾಡಿದಾಗ ಈತನ ಚೀಟಿಂಗ್ ಕೇಸ್ ಹೊರಬಿದ್ದಿದೆ.

ಸಿನಿಮಾ ಮಾಡುವ ಹುಚ್ಚಿಗಾಗಿಯೇ ಈ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದ್ದು, ಆರೋಪಿಯಿಂದ 3 ಕಾರು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

Shivarjun Movie Gallery

Actor Bullet Prakash Movie Gallery