ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ, 2019ರ ಬ್ಲಾಕ್ ಬಸ್ಟರ್. ಮುನಿರತ್ನ ನಿರ್ಮಾಣದ ಈ ಚಿತ್ರದ ಶತದಿನೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಶಿವರಾತ್ರಿಗೆ ಉಪವಾಸವಿದ್ದು, ಜಾಗರಣೆ ಮಾಡೋದು ಶಿವಭಕ್ತರ ಸಂಪ್ರದಾಯ. ಆ ದಿನ ನೀವು ಮತ್ತಿಕೆರೆಯ ಜೆ.ಪಿ.ಪಾರ್ಕ್ ಮತ್ತು ಲಗ್ಗೆರೆಯ ಡಾ.ವಿಷ್ಣುವರ್ಧನ್ ಆಟದ ಮೈದಾನಗಳಲ್ಲಿ ರಾತ್ರಿಯಿಡೀ ಶಿವರಾತ್ರಿ ಕುರುಕ್ಷೇತ್ರ ಸಂಭ್ರಮ.
ಜೆ.ಪಿ.ಪಾರ್ಕ್‍ನಲ್ಲಿ ರಾತ್ರಿ 7ರಿಂದ 9ರವರೆಗೆ, ವಿಷ್ಣುವರ್ಧನ್ ಮೈದಾನದಲ್ಲಿ ರಾತ್ರಿ 9ರಿಂದ 11ರವರೆಗೆ ಕುರುಕ್ಷೇತ್ರ ಸಂಭ್ರಮ. ಚಿತ್ರದ ಎಲ್ಲ ಕಲಾವಿದರು, ತಂತ್ರಜ್ಞರು ಎರಡೂ ವೇದಿಕೆಗಳಲ್ಲಿರ್ತಾರೆ. ದರ್ಶನ್ ಅವರಂತೂ 100% ಪಕ್ಕಾ. ಸಾಹೋರೆ ಸಾಹೋ..