` ಸಂಜನಾ ಗಲ್ರಾನಿ ಮದುವೆಗೆ ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanjana galrani all set to get married in reality show
Sanjana Galrani

ಗಂಡ ಹೆಂಡತಿ ಖ್ಯಾತಿಯ ಸಂಜನಾ ಗಲ್ರಾನಿ, ಈಗ ಮದುವೆಗೆ ರೆಡಿಯಾಗುತ್ತಿದ್ದಾರೆ. ಅದೂ ಕೋಟ್ಯಂತರ ಜನರ ಎದುರಿಗೆ ಸ್ವಯಂವರದ ಮೂಲಕ. ಹಿಂದಿಯ ಮುಜ್ಸೆ ಶಾದಿ ಕರೋಗಿ ಕಾರ್ಯಕ್ರಮದಲ್ಲಿ ರಿಯಾಲಿಟಿ ಶೋನಲ್ಲಿ ಸಂಜನಾ ಈಗ ವಧು. ಸಂಜನಾ ಅವರನ್ನು ಸೆಲೆಕ್ಟ್ ಮಾಡಬೇಕಿರೋದು ಬಿಗ್ ಬಾಸ್ ಮನೆಯಲ್ಲಿ ಚೆಂದ ಕಂಡವರಿಗೆಲ್ಲ ಮುತ್ತು ಕೊಟ್ಟು ಸುದ್ದಿಯಾಗಿದ್ದ ಪಾರಸ್ ಚಾಬ್ರಾ.

ರಾಣಿಯೋಂಕೆ ರಾಣಿ.. ಸಂಜನಾ ಗಲ್ರಾನಿ ಎಂದು ತಮ್ಮನ್ನು ಪರಿಚಯಿಸಿಕೊಂಡಿರುವ ಸಂಜನಾಗೆ ಪಾರಸ್ ಅಂದ್ರೆ ತುಂಬಾ ಇಷ್ಟವಂತೆ. ನಾನೂ ಬೋಲ್ಡ್.. ಅವನೂ ಬೋಲ್ಡ್.. ಎಂದಿರೋ ಸಂಜನಾ ಶೋನಲ್ಲಿ ಕಂಟಿನ್ಯೂ ಆಗಿದ್ದಾರೆ.

ಅದಾಗಲೇ ಚಾಬ್ರಾ ಕೆನ್ನೆಗೆ ಒಂದು ಮುತ್ತು ಕ್ಯಾಲರಿ ಬರ್ನ್ ಮಾಡಿಕೊಂಡಿರೋ ಸಂಜನಾ, ಅಲ್ಲಿಯೇ ಮದುವೆ ಓಲಗ ಊದಿಸುತ್ತಾರಾ..? ವೇಯ್ಟ್.

 

Shivarjun Movie Gallery

KFCC 75Years Celebrations and Logo Launch Gallery