` ``ಬುಕ್ ಮೈ ಶೋ ಕಚೇರಿ ಎದುರು ಆತ್ಮಹತ್ಯೆ ಮಾಡ್ಕೋತೀನಿ'' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
book my show tyrant continues, director ravi teja fumes
Sagutha Doora Doora Director Ravi Teja,

ಸಾಗುತ ದೂರ ದೂರಾ.. ಇದೇ ವಾರ ರಿಲೀಸ್ ಆಗಿರುವ ಹೊಸ ಸಿನಿಮಾ. ಅಪೇಕ್ಷಾ ಪುರೋಹಿತ್, ಮಹೇಶ್, ಉಷಾ ಭಂಡಾರಿ ಅಭಿನಯದ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಆದರೆ ಬುಕ್ ಮೈ ಶೋನಲ್ಲಿ ಚಿತ್ರಕ್ಕೆ ಬೇಕಾಬಿಟ್ಟಿ ರೇಟಿಂಗ್ ಕೊಟ್ಟಿದ್ದಾರೆ.

`ಬುಕ್ ಮೈ ಶೋನವರು ಮನಸ್ಸಿಗೆ ಬಂದಂತೆ ರೇಟಿಂಗ್ ಕೊಡ್ತಿದ್ದಾರೆ. ಇದರಿಂದ ಕನ್ನಡ ಚಿತ್ರಗಳಿಗೆ ಹಾನಿಯಾಗುತ್ತಿದೆ. ಬುಕ್ ಮೈ ಶೋನವರು ದುಡ್ಡು ಕೊಟ್ರೆ ರೇಟಿಂಗ್ ಕೊಡೋದಾಗಿ  ಹೇಳ್ತಿದ್ದಾರೆ. ಈ ಧಂಧೆ, ಮಾಫಿಯಾಗೆ ಫುಲ್ ಸ್ಟಾಪ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ ಸಾಗುತ ದೂರ ದೂರ ನಿರ್ದೇಶಕ ರವಿತೇಜ.

ಕನ್ನಡ ಚಿತ್ರಗಳಿಗಾಗಿ ಕನ್ನಡಿಗರೇ ಒಂದು ಆ್ಯಪ್ ಮಾಡಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ. ಅಮಿತ್ ಪೂಜಾರಿ ನಿರ್ಮಾಣದ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರೂ, ಬುಕ್ ಮೈ ಶೋ ರೇಟಿಂಗ್ ಕೊಟ್ಟಿಲ್ಲ.

Shivarjun Movie Gallery

KFCC 75Years Celebrations and Logo Launch Gallery