` ವಾರಸ್ದಾರ ವಿವಾದಕ್ಕೆ ಫುಲ್ ಸ್ಟಾಪ್ : ಸುದೀಪ್ ರಿಲ್ಯಾಕ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep image
sudeep

ವಾರಸ್ದಾರ ಧಾರಾವಾಹಿ ನಿಮಗೆ ನೆನಪಿರಬಹುದು. ಝೀ ಕನ್ನಡದಲ್ಲಿ ಬರುತ್ತಿದ್ದ ಈ ಧಾರಾವಾಹಿಗೆ ಕಿಚ್ಚ ಸುದೀಪ್ ನಿರ್ಮಾಪಕರಾಗಿದ್ದರು. ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ನಿರ್ಮಾಣದ ಧಾರಾವಾಹಿ, ಒಳ್ಳೆಯ ಟಿಆರ್ಪಿಯನ್ನೂ ಕಂಡಿತ್ತು. ಆದರೆ, ಧಾರಾವಾಹಿ ಟೀಂ ಹಾಗೂ ಸುದೀಪ್ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ದೂರು ಕೊಟ್ಟಿದ್ದರು.

ತಮ್ಮ ತೋಟದಲ್ಲಿ ಶೂಟಿಂಗ್ ಮಾಡಿದ ವೇಳೆ ವಾರಸ್ದಾರ ಟೀಂನಿಂದ ನಮಗೆ ನಷ್ಟವಾಗಿದೆ. ಆ ನಷ್ಟವನ್ನು ಭರಿಸಿಕೊಡಿ ಎಂದು ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಪ್ರಕರಣದಲ್ಲಿ ಸುದೀಪ್ ಅವರಿಗೆ ಗೆಲುವಾಗಿದೆ.

ದೂರಿನಲ್ಲಿ ಯಾವುದೇ ಹುರುಳಿಲ್ಲ. ದೀಪಕ್ ಮಯೂರ್ ಬೇರೆ ವ್ಯವಹಾರಗಳಲ್ಲಿ ನಷ್ಟ ಮಾಡಿಕೊಂಡು ಅದನ್ನು ಧಾರಾವಾಹಿ ತಂಡದಿಂದ ತುಂಬಿಕೊಳ್ಳಲು ಯತ್ನಿಸಿದ್ದಾರೆ ಎಂದು ತೀರ್ಪು ನೀಡಿದೆ. ಹೀಗಾಗಿ ಸುದೀಪ್ ವಿರುದ್ಧದ ದೂರು ಖುಲಾಸೆಯಾಗಿದೆ ಎಂದು ಸುದೀಪ್ ಪರ ವಕೀಲ ಗೋಪಿನಾಥ್ ತಿಳಿಸಿದ್ದಾರೆ.

Shivarjun Movie Gallery

Actor Bullet Prakash Movie Gallery