` ರೀಮೇಕ್ ಮಾಡಿದಾಗ ಬೈದವರು ಸ್ವಮೇಕ್ ಮಾಡಿದಾಗ ನೋಡ್ತಿಲ್ಲ ಯಾಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gentlemen image
prajwal devaraj

ಗುರು ದೇಶಪಾಂಡೆ, ರಾಜಾಹುಲಿಯಂತ ಬ್ಲಾಕ್ ಬಸ್ಟರ್ ಕೊಟ್ಟ ಡೈರೆಕ್ಟರ್. ಅವರೀಗ ಹೊಚ್ಚ ಹೊಸ ಸಿನಿಮಾ ಮಾಡಿದ್ದಾರೆ. ಜಂಟಲ್ಮನ್. ಸ್ವತಃ ನಿರ್ದೇಶಕರಾಗಿದ್ದರೂ, ಇನ್ನೊಬ್ಬ ನಿರ್ದೇಶಕನ ಪ್ರಯತ್ನವನ್ನು ಮೆಚ್ಚಿ, ಹೊಸತನದ ಕಥೆಗೆ ನಿರ್ಮಾಪಕರಾಗಿದ್ದಾರೆ.

ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಅಪರೂಪ ಎನ್ನಿಸುವ ಕಥೆ ಜಂಟಲ್ಮನ್ ಚಿತ್ರದಲ್ಲಿದೆ. ಒಳ್ಳೆಯ ಮೇಕಿಂಗ್, ನಟನೆ, ಚಿತ್ರಕಥೆ ಎಲ್ಲವೂ ಇರುವ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಆದರೆ.. ಅವರು ನಿರೀಕ್ಷಿಸಿದಷ್ಟು ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.

ಇದರ ಬಗ್ಗೆ ನಟ ಸಂಚಾರಿ ವಿಜಯ್ ಬೇಸರ ಮಾಡಿಕೊಂಡಿದ್ದರು. ಒಳ್ಳೆಯ ಸಿನಿಮಾ ಮಾಡಿದ್ದೇವೆ. ನೋಡಿ.. ಗೆಲ್ಲಿಸಿ ಎಂದಿದ್ದರು. ಈಗ ನಿರ್ಮಾಪಕ ಗುರು ದೇಶಪಾಂಡೆ ಕೂಡಾ ಬೇಸರ ಹೊರಹಾಕಿದ್ದಾರೆ. ಸ್ವಮೇಕ್ ಮಾಡಿ ಮಾಡಿ ಎಂದು ಬೈತಾ ಇದ್ರಿ. ಈಗ ಸ್ವಮೇಕ್ ಮಾಡಿದ್ದೇನೆ. ಒಳ್ಳೆಯ ಚಿತ್ರ ಎಂದು ಹೊಗಳಿದ್ದೀರಿ. ಆದರೆ.. ಸಿನಿಮಾ ನೋಡೋಕೆ ಬರ್ತಿಲ್ಲ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಅಭಿನಯದ ಜಂಟಲ್ಮನ್ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Shivarjun Movie Gallery

Actor Bullet Prakash Movie Gallery