ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಟಾರ್ ಆದವರು ನಟ ರಿಷಬ್ ಶೆಟ್ಟಿ. ಒಂದು ಮೊಟ್ಟೆಯ ಮೂಲಕ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈ ಎರಡೂ ಒಟ್ಟಿಗೇ ಸೇರಿದಾಗ ಸೃಷ್ಟಿಯಾಗಿದ್ದು ಗರುಡ ಗಮನ ವೃಷಭ ವಾಹನ. ಇದು ಹೊಸ ಸಿನಿಮಾ. ಒಂದು ಮೊಟ್ಟೆಯ ಕಥೆ ನಂತರ ರಾಜ್ ಬಿ.ಶೆಟ್ಟಿ ಮತ್ತೆ ನಿರ್ದೇಶಕರಾಗಿರುವ ಚಿತ್ರವಿದು.
ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ನಟಿಸುತ್ತಿದ್ದಾರೆ. ಇಲ್ಲಿ ಎರಡು ಪಾತ್ರಗಳಿವೆ. ಒಂದು ಕ್ರೋಧದ ಪ್ರತಿರೂಪ. ಶಿವನಂತೆ. ಇನ್ನೊಂದು ನಿಯಂತ್ರಣದ ಪ್ರತಿರೂಪ. ವಿಷ್ಣು ಇದ್ದಂತೆ. ಈ ಇಬ್ಬರೂ ಒಂದಾದರೆ ಯಾವ ಹಂತಕ್ಕೆ ಬೆಳೆಯಬಹುದು ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರೆ ರಿಷಬ್ ಶೆಟ್ಟಿ.
ಮೊದಲು ಹರಿಹರ ಎಂದೇ ಹೆಸರಿಡುವ ಆಲೋಚನೆ ಇತ್ತಂತೆ. ಆನಂತರ ಇವರು ಹರಿ ಹರ ಅಲ್ಲ, ಅವರ ಅಂಶಗಳಿರೋ ಪಾತ್ರಗಳು ಎನ್ನಿಸಿದ್ದರಿಂದ ಗರುಡಗಮನ ಹರಿ, ವೃಷಭವಾಹನ ಶಿವ ಎಂದು ಹೆಸರಿಟ್ಟರಂತೆ. ವಿಶೇಷವೆಂದರೆ ಚಿತ್ರದ ಶೂಟಿಂಗ್ ಮುಗಿದಿದೆ. ಜೂನ್‍ನಲ್ಲಿ ರಿಲೀಸ್.