` ಮದಗಜನಿಗೆ ಮಹಾರಾಣಿಯಾಗಲು ಅಶಿಕಾ ತೆಗೆದುಕೊಂಡ ರಿಸ್ಕ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ashika takes a huge risk for the role of madagaa
Ashika Ranganath Image from 'Madagaja'

ಮದಗಜನ ಮಹಾರಾಣಿ ಯಾರು..? ಎಂಬ ಕುತೂಹಲವನ್ನಿಟ್ಟು ಒಂದಿಡೀ ದಿನ ಕಾಯಿಸಿದ್ದ ಮದಗಜ ಚಿತ್ರತಂಡ ಈಗ ಮದಗಜನ ಮಹಾರಾಣಿ ಯಾರು ಅನ್ನೋ ಗುಟ್ಟು ಬಿಟ್ಟುಕೊಟ್ಟಿದೆ. ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಮದಗಜನ ಹೀರೋಯಿನ್. ಚಿತ್ರದಲ್ಲಿ ಅವರದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರವಂತೆ.

ವಿದ್ಯಾವಂತೆ. ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಇರುವ ಹುಡುಗಿ. ತುಂಬಾ ಬೋಲ್ಡ್, ರಫ್ & ಟಫ್ ಪಾತ್ರ. ರಾ ಲುಕ್ ಎಂದು ಪಾತ್ರದ ಬಗ್ಗೆ, ವಿಶೇಷತೆ ಬಗ್ಗೆ ಪ್ರೀತಿಯಿಂದ ಮಾತಾಡ್ತಾರೆ ಅಶಿಕಾ. ಪಾತ್ರಕ್ಕಾಗಿ ಸಿದ್ಧತೆ ಬೇಕಿದೆ. ನಿರ್ದೇಶಕರು ಕೆಲವು ಟಿಪ್ಸ್ ಕೊಟ್ಟಿದ್ದಾರೆ ಎನ್ನುವ ಅಶಿಕಾರನ್ನು ನಟ ಶ್ರೀಮುರಳಿ ಸ್ವಾಗತಿಸಿದ್ದಾರೆ.

ಹಲವು ನಾಯಕಿಯರನ್ನು ನೋಡಿದೆವು. ಆದರೆ.. ಈ ಪಾತ್ರಕ್ಕೆ ಸೂಕ್ತ ಎನಿಸಿದ್ದು ಅಶಿಕಾ ರಂಗನಾಥ್ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಉಮಾಪತಿ ನಿರ್ಮಾಣದ ಚಿತ್ರಕ್ಕೆ ಫೆ.20ರಂದು ಮುಹೂರ್ತ ನಡೆಯಲಿದೆ.

ಆದರೆ ವಿಷಯ ಇದ್ಯಾವುದೂ ಅಲ್ಲ. ಈ ಚಿತ್ರಕ್ಕಾಗಿ ಅಶಿಕಾ ಒಂದು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಅಶಿಕಾ ಇರೋದೇ ಬೆಳ್ಳಗೆ. ಆದರೆ ಈ ಪಾತ್ರಕ್ಕಾಗಿ ಅವರ ಮೈಬಣ್ಣ ಕಪ್ಪಾಗಬೇಕು. ಬಿಸಿಲಿನಲ್ಲಿ ನಿಂತು ಚರ್ಮವನ್ನು ಕಪ್ಪಾಗಿಸಿಕೊಳ್ಳಬೇಕು. ಅದಕ್ಕಾಗಿ ಫೆಬ್ರವರಿ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇನ್ನು ಸಿನಿಮಾ ಮುಗಿದ ನಂತರ ಸ್ಕಿನ್ ಟೋನ್ ಮತ್ತೆ ಮೊದಲಿನಂತಾಗುವವರೆಗೆ ಬೇರೆ ಸಿನಿಮಾ ಮಾಡೋಕೂ ಆಗಲ್ಲ. ಅಷ್ಟರಮಟ್ಟಿಗೆ ಸಿನಿಮಾಗೆ ದೊಡ್ಡ ರಿಸ್ಕ್‍ನ್ನೇ ತೆಗೆದುಕೊಂಡಿದ್ದಾರೆ ಅಶಿಕಾ ರಂಗನಾಥ್.

Shivarjun Movie Gallery

Popcorn Monkey Tiger Movie Gallery