` ಲಿಪ್ ಲಾಕ್.. ಸ್ಮೋಕಿಂಗ್.. ಏಕ್ ಲವ್ ಯಾ ಟೀಸರ್ ಸೆನ್ಸೇಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ek love ya teaser sensation
Ek Lovw Ya Movie Image

ಚಿತ್ರರಸಿಕರು ಕಾಯುತ್ತಿದ್ದ ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಟೀಸರ್, ನಿರೀಕ್ಷೆಯಂತೆಯೇ ಸಂಚಲನ ಸೃಷ್ಟಿಸಿದೆ. ಟೀಸರ್ ಶುರುವಾಗುವುದೇ ಹೀರೋ ರಾಣಾ ಜೊತೆ ರಚಿತಾ ರಾಮ್ ಸಿಗರೇಟ್ ಹಚ್ಚಿಕೊಳ್ಳೋದ್ರಿಂದ. ಮೊದಲ ಫ್ರೇಮ್ನಲ್ಲೇ ಬೆಚ್ಚಿ ಬೀಳಿಸೋ ಪ್ರೇಮ್, ಭಗ್ನ ಪ್ರೇಮಿಯೊಬ್ಬನ ಹತಾಶೆಯನ್ನು ಹೇಳಿಸುತ್ತಾರೆ.

ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬಹುದು ಎನ್ನಿಸಿದರೂ.. ಪ್ರೇಮ್ ಮತ್ತೇನೋ ಇದೆ ಎನ್ನುವ ಕುತೂಹಲವನ್ನಂತೂ ಸೃಷ್ಟಿಸುತ್ತಾರೆ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಹೇಳುತ್ತಿರುವ ಫಸ್ಟ್ ಲವ್ ಸ್ಟೋರಿ ಇದು.

ರಕ್ಷಿತಾ ಅವರ ಸೋದರ ರಾಣಾ ಆರಂಗ್ರೇಟಂ ಚಿತ್ರ ಏಕ್ ಲವ್ ಯಾ. ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ. ರಾಣಾ ಜೊತೆ ರೀಷ್ಮಾ ಮತ್ತು ರಚಿತಾ ಇಬ್ಬರೂ ಇದ್ದಾರೆ. ಕೊನೆಯಲ್ಲಿ ಲಿಪ್ ಲಾಕ್ ತೋರಿಸಿ ಮೈ ಬೆಚ್ಚಗಾಗಿಸ್ತಾರೆ ಪ್ರೇಮ್. ಅರ್ಜುನ್ ಜನ್ಯಾ ಮತ್ತೊಂದು ಮ್ಯೂಸಿಕಲ್ ಹಿಟ್ ಕೊಡುವ ಸಿಗ್ನಲ್ ಕೊಟ್ಟಿದ್ದಾರೆ.

Shivarjun Movie Gallery

Popcorn Monkey Tiger Movie Gallery