ರಚಿತಾ ರಾಮ್ ಅವರ ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿರುವುದಂತೂ ಸತ್ಯ. ರಚಿತಾ ರಾಮ್ ಹೋಮ್ಲಿ ಗರ್ಲ್. ಗ್ಲಾಮರಸ್ ಆಗಿ ನಟಿಸಿದ್ದರೂ.. ಅಲ್ಲೊಂದು ಬೌಂಡರಿ ಹಾಕಿಕೊಂಡೇ ಇರುವ ರಚಿತಾ, ಅದನ್ನು ಸ್ವಲ್ಪ ಮೀರಿ ಹೋಗಿದ್ದು ಐ ಲವ್ ಯೂ ಚಿತ್ರದಲ್ಲಿ. ಇನ್ನೊಮ್ಮೆ ಅಂತಾ ಪಾತ್ರ ಮಾಡಲ್ಲ ಎಂದಿದ್ದ ರಚಿತಾ, ಈಗ ಸಿಗರೇಟು ಹೊಗೆ ಬಿಡುತ್ತಿರುವ ಫೋಟೋ ರಿವೀಲ್ ಆಗಿ ವೈರಲ್ ಆಗಿದೆ.
ಅಂದಹಾಗೆ ಇದು ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಸ್ಟಿಲ್ ಅಂತೆ. ಇದು ಹೇಗೆ ಲೀಕ್ ಆಯ್ತೋ ಗೊತ್ತಿಲ್ಲ ಎಂದಿರುವ ಪ್ರೇಮ್, ರಚಿತಾ ರಾಮ್ ಪಾತ್ರದ ಕುತೂಹಲವನ್ನೂ ಹೆಚ್ಚಿಸಿದ್ದಾರೆ.
ಚಿತ್ರದಲ್ಲಿ ರಚಿತಾ ರಾಮ್, ಸಿಗರೇಟು ಸೇದುವ ದೃಶ್ಯವಿದೆ. ಅಷ್ಟೇ ಅಲ್ಲ.. ಇನ್ನೂ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ ರಚಿತಾ ಎನ್ನುವ ಪ್ರೇಮ್ ಅಚ್ಚರಿ ಹುಟ್ಟಿಸಿದ್ದಾರೆ. ರಕ್ಷಿತಾ ಪ್ರೇಮ್ ಸೋದರ ರಾಣಾ ನಟಿಸುತ್ತಿರುವ ಚಿತ್ರವಿದು.