ತೆಲುಗು ಇಂಡಸ್ಟ್ರಿಯಲ್ಲಿ ಕ್ಯೂಟ್ ಕ್ಯೂಟ್ ಆಗಿ ಹಾಟ್ ಅಲೆ ಎಬ್ಬಿಸಿರುವ ಚೆಲುವೆ ರಶ್ಮಿಕಾ ಮಂದಣ್ಣ. ತೆಲುಗಿನಲ್ಲಿ ಅಲ್ಲು ಅರ್ಜುನ್, ನಿತಿನ್ ಜೊತೆ ನಟಿಸುತ್ತಿರುವ ರಶ್ಮಿಕಾ, ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿದ್ದಾರೆ. ಆದರೆ.. ಕನ್ನಡದಲ್ಲಿ ನಟಿಸಿರುವ ಪೊಗರು ಇನ್ನಷ್ಟೇ ರಿಲೀಸ್ ಆಗಬೇಕಿದೆ. ಯಜಮಾನ ನಂತರ ಪೊಗರು ಎದುರು ನೋಡುತ್ತಿರುವ ಪ್ರೇಕ್ಷಕ ಪ್ರಭು ಕೇಳುತ್ತಿರುವ ಪ್ರಶ್ನೆ.. ರಶ್ಮಿಕಾ ಮುಂದಿನ ಕನ್ನಡ ಸಿನಿಮಾ ಯಾವುದು..?
ಈ ಪ್ರಶ್ನೆಗೆ ಅವರ ಉತ್ತರ ‘ಕನ್ನಡ ಸಿನಿಮಾ ಇದೆ. ನಾನು ಹೇಳಲ್ಲ. ಸದ್ಯಕ್ಕೆ ಅದು ಸೀಕ್ರೆಟ್’ ಎಂದಿದ್ದಾರೆ. ಒಂದು ಕಡೆ ಮದಗಜ ಸೃಷ್ಟಿಸಿರೋ ಕುತೂಹಲ.. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಅವರ ಈ ಸ್ಟೇಟ್ಮೆಂಟ್ ಲಿಂಕ್ ಆದರೆ.. ಅದು ಯಾವ ಚಿತ್ರ ಇರಬಹುದು ಅನ್ನೋ ಕುತೂಹಲ ಮೂಡಿದ್ರೆ ಆಶ್ಚರ್ಯವೇನೂ ಇಲ್ಲ. ಹೌದಾ ರಶ್ಮಿಕಾ..?