` ಯಾರವಳು.. ಮದಗಜನ ಮಹಾರಾಣಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
who is this mysterious madagaja heroine
Madagaja Heroine

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಮದಗಜ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರ, ಈಗ ಚಿತ್ರರಸಿಕರ ತಲೆಗೆ ಹೊಸದೊಂದು ಹುಳ ಬಿಟ್ಟಿದೆ. ಹೀರೋಯಿನ್ ಯಾರು..?

ತಲೆ ತುಂಬಾ ಹೂ.. ಸಾಂಪ್ರದಾಯಿಕ ಸೀರೆಯಲ್ಲಿರುವ ಚೆಲುವೆಯ ಫೋಟೋ ಹಾಕಿ ಮುಖವನ್ನು ತೋರಿಸಿಲ್ಲ. ಮದಗಜ ಚಿತ್ರದ ನಾಯಕಿ ದೊಡ್ಡ ನಟಿ. ಯಾರಿವರು ಊಹಿಸಿ ಎಂದು ವಿಭಿನ್ನವಾದ ಚಾಲೆಂಜ್ ಹಾಕಿದೆ ಚಿತ್ರತಂಡ.

ಯಾರಿರಬಹುದು..? ಅಭಿಮಾನಿಗಳ ಉತ್ತರವೂ ಮಜವಾಗಿದೆ. ಅಶಿಕಾ ರಂಗನಾಥ್, ಸಮಂತಾ, ಶಾನ್ವಿ ಶ್ರೀವಾತ್ಸವ್, ಕೀರ್ತಿ ಸುರೇಶ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿವೆ. ಅಭಿಮಾನಿಗಳಿಂದ ಹೆಚ್ಚು ವೋಟ್ ಬಿದ್ದಿರೋದು ಚುಟು ಚುಟು ಸ್ಟಾರ್ ಅಶಿಕಾ ರಂಗನಾಥ್ ಅವರಿಗೆ. ಆದರೆ.. ಅವರೇನಾ..? ಗೊತ್ತಿಲ್ಲ. ನಿರ್ಮಾಪಕರಾಗಲೀ..ನಿರ್ದೇಶಕರಾಗಲೀ.. ಶ್ರೀಮುರಳಿಯಾಗಲೀ.. ಗುಟ್ಟು ಬಿಟ್ಟು ಕೊಡ್ತಾ ಇಲ್ಲ. ಶಿವರಾತ್ರಿಯ ದಿನ ಓಂ ನಮಃ ಶಿವಾಯ ಎನ್ನುವಾಗ ಮುಹೂರ್ತ ನಡೆಯಲಿದ್ದು, ಆ ದಿನವಂತೂ ಪಕ್ಕಾ ಗೊತ್ತಾಗುತ್ತೆ.

Shivarjun Movie Gallery

KFCC 75Years Celebrations and Logo Launch Gallery