` ಸಾಗುತ ದೂರ ದೂರ ಬಂದ ಅಪೇಕ್ಷಾ ಪುರೋಹಿತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
apeksha purohith hopes high with sagutha doora doora
Sagutha Doora Doora Movie Image

ಅಪೇಕ್ಷಾ ಪುರೋಹಿತ್, ಬಣ್ಣ ಹಚ್ಚಿದ್ದು ಮೊದಲು ಕಿರುತೆರೆಯಲ್ಲಿ. ಈಗ ಸಾಗುತ ದೂರ ದೂರ ಬಂದುಬಿಟ್ಟಿದ್ದಾರೆ. ಈ ವಾರ ಥಿಯೇಟರಿಗು ಬರುತ್ತಿದ್ದಾರೆ. ಇದು ತಾಯಿ ಮತ್ತು ಮಗನ ಬಾಂಧವ್ಯ, ವಾತ್ಸಲ್ಯದ ಕಥೆ.

ವರ್ಷದ ಹಿಂದೆ ಶುರುವಾಗಿದ್ದ ಚಿತ್ರ ಈಗ ರಿಲೀಸ್ ಆಘುತ್ತಿದೆ. ಚಿತ್ರ ಬಹುತೇಕ ಶೂಟಿಂಗ್ ಆಗಿರೋದು ಕುಂದಾಪುರ, ಚಿಕ್ಕಮಗಳೂರಿನಲ್ಲಿ. ಒಂದು ಸುಂದರ ಜರ್ನಿಯಂತೆ ಸಾಗುವ ಕಥೆ, ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಚಿತ್ರದಲ್ಲಿ ಅಪೇಕ್ಷಾ ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ. ‘ತಾಯಿಗಾಗಿ ಪರಿತಪಿಸುವ ಮಗ, ಮಗನಿಗಾಗಿ ಹುಡುಕಾಟಕ್ಕಿಳಿವ ತಾಯಿ. ಇವರಿಬ್ಬರ ಜರ್ನಿಯಲ್ಲಿ ನಾನೂ ಸೇರ್ಪಡೆಗೊಳ್ಳುತ್ತೇನೆ. ಇದು ಕಮರ್ಷಿಯಲ್ & ಕಲಾತ್ಮಕ ವಿಭಾಗ ಎರಡಕ್ಕೂ ಒಗ್ಗುವ ಸಿನಿಮಾ ಎನ್ನುತ್ತಾರೆ ಅಪೇಕ್ಷಾ.

 ತಾಯಿ ಪಾತ್ರದಲ್ಲಿ ಉಷಾ ಭಂಡಾರಿ ನಟಿಸಿದ್ದು, ಹೊಸಬರೂ ಬಣ್ಣ ಹಚ್ಚಿದ್ದಾರೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ 4 ಹಾಡುಕಟ್ಟಿಕೊಟ್ಟಿದ್ದಾರೆ. ಆಮಿತ್ ಪೂಜಾರಿ ಚಿತ್ರದ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery