KGF ಚಾಪ್ಟರ್ 2 ಚಿತ್ರದ ಕಥೆ ಏನು..? ನಿರ್ದೇಶಕ ಪ್ರಶಾಂತ್ ನೀಲ್ ಗುಟ್ಟು ಗುಟ್ಟಾಗಿಯೇ ಇಟ್ಟಿದ್ದಾರೆ. ಕೆಜಿಎಫ್ ಟೀಂನಿಂದ ಯಾವುದೇ ಸೀಕ್ರೆಟ್ ಹೊರಬರುತ್ತಿಲ್ಲ. ಆದರೆ.. ಯಶ್ ಮಾಡಿರುವ ಒಂದು ಟ್ವೀಟ್.. ಕಥೆಯ ಗುಟ್ಟು ಹೇಳಿಬಿಟ್ಟಿದೆ. ಅಂದಹಾಗೆ ಇದು ಅಭಿಮಾನಿಗಳೇ ಊಹಿಸಿರುವ ಕಥೆ.
ಇಷ್ಟಕ್ಕೂ ಆಗಿದ್ದೇನಂದ್ರೆ.. ಇತ್ತೀಚೆಗೆ ರವೀನಾ ಟಂಡನ್ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ರಲ್ಲ. ಆಗ ಅವರ ಪಾತ್ರದ ಹೆಸರು ರಮಿಕಾ ಸೇನ್ ಎಂದೂ.. ಡೆತ್ ವಾರೆಂಟ್ ಕೊಡಲು ಬರುವ ಪ್ರಧಾನಿಯೆಂದೂ ಗೊತ್ತಾಗಿತ್ತು. ಈಗ ಯಶ್ ಮಾಡಿರುವ ಟ್ವೀಟ್ನಲ್ಲಿ ಆ ರಹಸ್ಯ ಭೇದಿಸಿದ್ದಾರೆ ರಾಕಿಭಾಯ್ ಫ್ಯಾನ್ಸ್.
ಶೂಟಿಂಗ್ ವೇಳೆ ರವೀನಾ ಟಂಡನ್ ಜೊತೆಗಿರುವ ಫೋಟೋ ಹಾಕಿರುವ ಯಶ್ ‘ರಾಕಿ ಭಾಯ್ ಟೆರಿಟರಿಯೊಳಗೆ ರಮಿಕಾ ಸೇನ್‌ಗೆ ಸ್ವಾಗತ ಸಿಗದೇ ಇರಬಹುದು. ಆದರೆ ರವೀನಾ ಮೇಡಮ್ ಅವರನ್ನು ಯಶ್ ಹೋಮ್‌ಟೌನ್‌ಗೆ ಸ್ವಾಗತಿಸುತ್ತಿದ್ದೇವೆ. ನೀವು ನಮ್ಮ ಸಿನಿಮಾ ತಂಡದ ಭಾಗವಾಗಿರುವುದಕ್ಕೆ ಖುಷಿ ಆಗುತ್ತಿದೆ. ಲೆಟ್ಸ್ ಹ್ಯಾವ್ ಎ ಬ್ಲಾಸ್ಟ್’ ಎಂದು ಬರೆದಿದ್ದಾರೆ.
ಮಿಕ್ಕಿದ್ದು ನಿಮಗೇ ಗೊತ್ತಾಗಿರಬಹುದು. ರಮಿಕಾ ಸೇನ್ ಎಂದರೆ ಪ್ರಧಾನಿಯ ಪಾತ್ರ. ಅಂದರೆ.. ಪ್ರಧಾನಿಗೂ ಎಂಟ್ರಿಯಿಲ್ಲದ ಕೋಟೆ ಕಟ್ಟಿಕೊಳ್ತಾನಾ ರಾಕಿಭಾಯ್..? ಅದಕ್ಕಾಗಿಯೇ ಆತನ ವಿರುದ್ಧ ಪ್ರಧಾನಿ ಡೆತ್ ವಾರೆಂಟ್ ಹೊರಡಿಸ್ತಾರಾ..? ಇದು ಅಭಿಮಾನಿಗಳು ಊಹಿಸಿರುವ ಕಥೆ.
ಇರಿ.. ಇರಿ.. ಸ್ವತಃ ಪ್ರಶಾಂತ್ ನೀಲ್ ಅವರೇ ನಿಬ್ಬೆರಗಾಗಿ ನೋಡುವ ಕಥೆಯನ್ನು ಅಭಿಮಾನಿಗಳೇ ಸೃಷ್ಟಿಸ್ತಾರೆ. ಯಾರಿಗ್ಗೊತ್ತು.. ಅದೇ ಇನ್ನೊಂದು ಕೆಜಿಎಫ್ ಆದರೂ ಆಗಬಹುದು.