` ಫೆ. 24 ಟ್ರಂಪ್ ಇಂಡಿಯಾಗೆ.. ಯುವರತ್ನ ಯೂರೋಪ್‍ಗೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yuvaratna movie team geared up for europe shoot
Yuvaratna Movie Image

ಫೆಬ್ರವರಿ 24, ಭಾರತ ಮತ್ತು ಅಮೆರಿಕ ಬಾಂಧವ್ಯಕ್ಕೆ ಮಹತ್ವದ ದಿನ. ಆ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದಾರೆ. ಅದೇ ದಿನ ಯುವರತ್ನ ಚಿತ್ರಕ್ಕೂ ಮಹತ್ವದ ದಿನ. ಚಿತ್ರತಂಡ ಫೆ.24ರಂದು ಯೂರೋಪ್‍ನತ್ತ ಹೊರಟಿದೆ.

ಯುವರತ್ನ ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗ್‍ಗಾಗಿ ಪುನೀತ್ ರಾಜ್‍ಕುಮಾರ್, ಸಯೇಷಾ ಯೂರೋಪ್‍ಗೆ ತೆರಳಲಿದ್ದಾರೆ. ಹೀರೋ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆಯಂತೆ.

ಎಜುಕೇಷನ್ ಮಾಫಿಯಾ ಕುರಿತ ಚಿತ್ರದ ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಯುವರತ್ನ ಚಿತ್ರದಲ್ಲಿ ತಾರಾಬಳಗವೇ ತುಂಬಿ ತುಳುಕುತ್ತಿದೆ. ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು.. ರಾಜಕುಮಾರ ಚಿತ್ರದ ನಂತರ ಮತ್ತೆ ಒಂದುಗೂಡಿರುವ ಚಿತ್ರವಿದು.