ಸಿನಿಮಾದಲ್ಲಿರೋ ಪೊಲೀಸರೇ ಬೇರೆ. ರಿಯಲ್ ಪೊಲೀಸರೇ ಬೇರೆ. ರೂಪಾ ಡಿ. ಮೌದ್ಗಲ್ ರಿಯಲ್ ಲೈಫ್ನಲ್ಲಿ ಖಡಕ್ ಆಫೀಸರ್ ಎಂದು ಹೆಸರು ಮಾಡಿರೋ ಅಧಿಕಾರಿ. ಪ್ರಸ್ತುತ ರೈಲ್ವೇಸ್ ಪೊಲೀಸ್ ಐಜಿಯಾಗಿರುವ ರೂಪಾ, ಗಾಯಕಿಯೂ ಹೌದು. ಅವರೀಗ ಸಿನಿಮಾಗೆ ಹಾಡಿದ್ದಾರೆ.
ದರ್ಶನ್ ಅವರ ಸೋದರ ಸಂಬಂಧಿ ಮನೋಜ್ ನಟಿಸುತ್ತಿರುವ ಟಕ್ಕರ್ ಚಿತ್ರದಲ್ಲಿ ರೂಪಾ ಹಾಡಿದ್ದಾರೆ. ರಘುಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ಮನೋಜ್ ಎದುರು ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ನಾಯಕಿ. ಕೆ.ಎನ್. ನಾಗೇಶ್ ಕೋಗಿಲು ಚಿತ್ರದ ನಿರ್ಮಾಪಕ.