ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಮತ್ತು ಆಕಾಂಕ್ಷಾ ನಟಿಸುತ್ತಿರುವ ಚಿತ್ರ ತ್ರಿವಿಕ್ರಮ. ಅಪ್ಪಟ ಲವ್ ಸ್ಟೋರಿಯ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಿರ್ದೇಶಕ ಸಹನಾ ಮೂರ್ತಿ. ಈ ಚಿತ್ರ ಈ ಬಾರಿಯ ವ್ಯಾಲೆಂಟೈನ್ಸ್ ಡೇಯನ್ನು ಒಂದು ವಾರ ಸೆಲಬ್ರೇಟ್ ಮಾಡಲು ಮುಂದಾಗಿದೆ.
ಫೆ.7ಕ್ಕೆ ರೋಸ್ ಡೇ, ಫೆ.8ಕ್ಕೆ ಪ್ರಪೋಸ್ ಡೇ, ಫೆ.9ಕ್ಕೆ ಚಾಕೊಲೇಟ್ ಡೇ, ಫೆ.10ಕ್ಕೆ ಟೆಡ್ಡಿ ಡೇ, ಫೆ.11ಕ್ಕೆ ಪ್ರಾಮಿಸ್ ಡೇ, ಫೆ.12ಕ್ಕೆ ಕಿಸ್ ಡೇ, ಫೆ.13 ಮತ್ತು ಫೆ.14ಕ್ಕೆ ವ್ಯಾಲೆಂಟೈನ್ಸ್ ಡೇ. ಹೀಗೆ ಒಂದು ವಾರವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ನಿರ್ಧರಿಸಿರುವ ತ್ರಿವಿಕ್ರಮ ಟೀಂ, ದಿನಕ್ಕೊಂದರಂತೆ ಥೀಮ್ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ.
ತ್ರಿವಿಕ್ರಮ ಪಕ್ಕಾ ಲವ್ ಸ್ಟೋರಿ. ನಮ್ಮ ಈ ಪ್ರಯತ್ನಕ್ಕೆ ಲವ್ಲೀ ರಿಯಾಕ್ಷನ್ ಸಿಕ್ಕಿದೆ ಎಂದಿದ್ದಾರೆ ಸಹನಾ ಮೂರ್ತಿ.