ದುನಿಯಾ ವಿಜನ್ ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಚಿತ್ರೀಕರಣ ಫೈನಲ್ ಹಂತದಲ್ಲಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಸ್ಮಶಾನದ ಸೆಟ್ಟಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಜಿಂಕೆ ಪಾರ್ಕ್ ಬಳಿಯ ಸ್ಮಶಾನದಲ್ಲೂ ಚಿತ್ರೀಕರಣ ಮಾಡಲಾಗಿದ್ದು, ಮಿಕ್ಕಂತೆ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಹಾಕಿರುವ ಸ್ಮಶಾನದ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅದೊಂದು ಮುಗಿದರೆ ಚಿತ್ರೀಕರಣ ಮುಗಿದಂತೆ ಎಂದಿದ್ದಾರೆ ದುನಿಯಾ ವಿಜಯ್.
ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಶಿವಕುಮಾರ್ ಹಾಕಿ ಕೊಟ್ಟಿರುವ ಸೆಟ್ ಬಗ್ಗೆ ಸಖತ್ ಖುಷಿಯಾಗಿದ್ದಾರೆ. ಹಾಡಿನ ಕಾನ್ಸೆಪ್ಟ್‍ಗೆ ಈ ಸೆಟ್ ಅದ್ಧೂರಿಯಾಗಿ ಸೆಟ್ ಆಗುತ್ತಿದೆ ಎಂದಿರುವ ಅವರು ಶಿವಕುಮಾರ್ ಕೆಲಸವನ್ನು ಹಾಡಿ ಹೊಗಳಿದ್ದಾರೆ.
ದುನಿಯಾ ವಿಜಯ್ ಹೀರೋ ಆಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜನಾ ಆನಂದ್ ನಾಯಕಿ.