ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಈಗ ಸೀನಿಯರ್ ನಟಿ. ಅವರೀಗ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರದ ಕೆಲಸವೇ ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡೋದು.
20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ರವೀನಾ, ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನಿಯ ಪಾತ್ರ ಮಾಡಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಾಗಿದ್ದ ಕಾರಣ, ರವೀನಾ ಪಾತ್ರದಲ್ಲಿ ಇಂದಿರಾ ಛಾಯೆಯೂ ಇದೆ.
ರವೀನಾ ಟಂಡನ್, ಇಲ್ಲಿ ರಮಿಕಾ ಸೇನ್ ಹೆಸರಿನ ಪಾತ್ರ ಮಾಡುತ್ತಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ವಾಗತ ಕೋರಿದ್ದಾರೆ.
ಯಶ್, ಸಂಜಯ್ ದತ್, ಅನಂತ ನಾಗ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2ಗೆ ವಿಜಯ್ ಕಿರಗಂದೂರು ನಿರ್ಮಾಪಕ. 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.