ಸಿನಿಮಾವೊಂದು ಕ್ರೇಜಿ ಸ್ಟಾರ್ ಮೆಚ್ಚುಗೆ ಗಳಿಸೋದು ಸಲೀಸಾದ ಮಾತಲ್ಲ. ಅಂಥಾದ್ದರಲ್ಲಿ ಜಂಟಲ್ಮನ್ ರವಿಚಂದ್ರನ್ಗೆ ಇಷ್ಟವಾಗಿಬಿಟ್ಟಿದ್ದಾನೆ. ಚಿತ್ರವನ್ನು ನೋಡಿದ ರವಿಚಂದ್ರನ್, ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋ ಸ್ಟ್ರಾಂಗ್ ಇರ್ತಾನೆ. ಆದರೆ, ಇಲ್ಲಿ ಹೀರೋನೇ ವೀಕ್. ದಿನದ 18 ಗಂಟೆ ನಿದ್ರೆ ಮಾಡುವ ಕಾಯಿಲೆ ಇರೋ ಪಾತ್ರವನ್ನ ಹೀರೋ ಮಾಡಿ, ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಒಂದು ಹೊಸತನದ ಫೀಲ್ ಕೊಡುವ ಸಿನಿಮಾ ಎಂದು ಹೊಗಳಿದ್ದಾರೆ ರವಿಚಂದ್ರನ್.
ರವಿಚಂದ್ರನ್ ಹೊಗಳಿಕೆ ಹೆಚ್ಚು ಸಂದಾಯವಾಗಿರುವುದು ನಿರ್ದೇಶಕ ಜಡೇಶ್ ಕುಮಾರ್ಗೆ. ಉಳಿದಂತೆ ರವಿಚಂದ್ರನ್ಗ ಎಂದಿನಂತೆ ಇಷ್ಟವಾಗಿರೋದು ಚಿತ್ರದಲ್ಲಿರೋ ಕ್ಯೂಟ್ ಲವ್ ಸ್ಟೋರಿ. ಪ್ರಜ್ವಲ್ ಮತ್ತು ನಿಶ್ವಿಕಾಗೆ ಎಕ್ಸ್ಟ್ರಾ ಮಾರ್ಕ್ಸ್ ಕೊಟ್ಟಿರೋ ರವಿಚಂದ್ರನ್, ಹೊಸತನಕ್ಕಾಗಿ, ಸ್ಪೆಷಲ್ ಅನುಭವಕ್ಕಾಗಿ ಜಂಟಲ್ಮನ್ ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಕರೆ ಕೊಟ್ಟಿದ್ದಾರೆ. ರವಿಚಂದ್ರನ್ ಇಷ್ಟಪಟ್ಟ ಇನ್ನೊಬ್ಬ ಸ್ಟಾರ್ ಬೇಬಿ ಆರಾಧ್ಯ. ಗುರುದೇಶಪಾಂಡೆ ನಿರ್ಮಾಣದ ಜಂಟಲ್ಮನ್, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.