` ಹೋಮ್ ಮಿನಿಸ್ಟರ್ ಮಗಳಿಗೂ.. ಗ್ಯಾರೇಜ್ ನಾಯಕನಿಗೂ `ಥರ್ಡ್ ಕ್ಲಾಸ್' ಪ್ರೀತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
first class love story in 3rd class
3rd Class Movie Image

ಅವಳು.. ಅಂದರೆ ರೂಪಿಕಾ.. ಹೋಮ್ ಮಿನಿಸ್ಟರ್ ಮಗಳು. ಮುದ್ದಿನ ಮಗಳು. ಸಂಗೀತ ಎಂದರೆ ಪಂಚಪ್ರಾಣ. ಅವನು.. ಅಂದರೆ ಜಗದೀಶ್.. ಅನಾಥ. ಗ್ಯಾರೇಜಿನಲ್ಲಿ ಕೆಲಸ ಮಾಡುವ ಹುಡುಗ.

ಅವರಿಬ್ಬರ ಮಧ್ಯೆ ಪ್ರೀತಿ ಹುಟ್ಟುತ್ತೆ. ಪ್ರೀತಿ, ಪ್ರೇಮ, ಹಣ, ಬಾಂಧವ್ಯದ ಸುತ್ತ ಕಥೆ ಹಬ್ಬಿಕೊಳ್ಳುತ್ತೆ. ಟೋಟ್ಟಲಿ ಇದು ಫಸ್ಟ್ ಕ್ಲಾಸ್ ಸಿನಿಮಾ. ಟೈಟಲ್ ಮಾತ್ರ ಥರ್ಡ್ ಕ್ಲಾಸ್ ಎನ್ನುತ್ತಾರೆ ರೂಪಿಕಾ.

ಹೀರೋ ಜಗದೀಶ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಪಕರೂ ಆಗಿದ್ದಾರೆ. ಅಷ್ಟೇ ಅಲ್ಲ ಚಿತ್ರತಂಡದಿಂದ ಅಂಧ ಅನಾಥ ಮಕ್ಕಳಿಗೆ 2 ಲಕ್ಷ ರೂ. 50 ಸಾವಿರ ಆಟೋ, ಕ್ಯಾಬ್ ಚಾಲಕರಿಗೆ 1 ಲಕ್ಷ ರೂ. ಜೀವವಿಮೆ, ಥರ್ಡ್ ಕ್ಲಾಸ್ ನಡೆ ಗ್ರಾಮದ ಕಡೆ ಅಭಿಯಾನದ ಮೂಲಕ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿರುವ ಚಿತ್ರತಂಡ ಸಮಾಜ ಸೇವೆಯ ಮೂಲಕವೇ ಚಿತ್ರದ ಪ್ರಚಾರ ಮಾಡಿರುವುದು ವಿಶೇಷ.