ತಿಥಿ ಸಿನಿಮಾ ಖ್ಯಾತಿಯ ಪೂಜಾ ಯುಟರ್ನ್ ತೆಗೆದುಕೊಂಡಿದ್ದಾರೆ. ಅವರು ನಟಿಸುತ್ತಿರುವ ಹೊಸ ಚಿತ್ರದ ಟೈಟಲ್ ಯುಟರ್ನ್-2. ಈ ಹಿಂದೆ ಬಂದಿದ್ದ ಶ್ರದ್ಧಾ ಶ್ರೀನಾಥ್, ರಾಧಿಕಾ ನಾರಾಯಣ್ ನಟಿಸಿದ್ದ ಯುಟರ್ನ್ ಚಿತ್ರಕ್ಕೂ ಈ ಯುಟರ್ನ್ 2ಗೂ ಸಂಬಂಧವಿಲ್ಲ. ಯುಟರ್ನ್2ಗೆ ಹೊಸ ನಿರ್ದೇಶಕ ಚಂದ್ರು ಓಬಯ್ಯ. ನಿರ್ದೇಶಕರೂ ಅವರೇ. ಹೀರೋ ಕೂಡಾ ಅವರೇ.
ನಿರ್ದೇಶಕ ಮತ್ತು ನಾಯಕನಾಗಿ ಇದು ನನಗೆ ಮೊದಲ ಸಿನಿಮಾ. ಈ ಹಿಂದೆ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದೇನೆ ಎನ್ನುವ ಚಂದ್ರು ಓಬಯ್ಯ ಚಿತ್ರದ ಅರ್ಧಕ್ಕರ್ಧ ಶೂಟಿಂಗ್ ಮುಗಿಸಿದ್ದಾರೆ.
ಚಿತ್ರದಲ್ಲಿ ನನ್ನದು ಯಾವುದಕ್ಕೂ ಕೇರ್ ಮಾಡದ, ಉಡಾಫೆ ಹುಡುಗಿಯ ಪಾತ್ರ. ಬುಲೆಟ್ ರೈಡಿಂಗ್ ಎಲ್ಲ ಇದೆ ಎಂದು ಪಾತ್ರದ ಬಗ್ಗೆ ಥ್ರಿಲ್ಲಾಗಿದ್ದಾರೆ ಪೂಜಾ.