` ನೀನಾಸಂ ಸತೀಶ್ ಕಾಣದಂತೆ ಮಾಯವಾದಾಗ ಧರ್ಮಣ್ಣ ಬಂದರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Neenasam Satheesh, Dharmanna Kadur Image
Neenasam Satheesh, Dharmanna Kadur

ಕಾಣದಂತೆ ಮಾಯವಾದನು ಚಿತ್ರದಲ್ಲಿ ಧರ್ಮಣ್ಣ ಕಡೂರು ಒಂದು ವಿಶೇಷ ಪಾತ್ರದಲ್ಲಿದ್ದಾರೆ. ಧರ್ಮಣ್ಣ ಪಾತ್ರವೇ ಇಡೀ ಚಿತ್ರದ ಅಟ್ರ್ಯಾಕ್ಷನ್. ಸಖತ್ ಡಿಫರೆಂಟಾಗಿದೆ ಎನ್ನುವ ಚಿತ್ರತಂಡ, ಪಾತ್ರದ ಗುಟ್ಟು ಬಿಟ್ಟುಕೊಡಲ್ಲ. ಅಂದಹಾಗೆ ಅದು ನೀನಾಸಂ ಸತೀಶ್ ಮಾಡಬೇಕಿದ್ದ ಪಾತ್ರ ಅನ್ನುವ ರಹಸ್ಯ ಸ್ವಲ್ಪ ತಡವಾಗಿ ಗೊತ್ತಾಗಿದೆ.

ಪಾತ್ರ ವಿಭಿನ್ನವಾಗಿದೆ ಎಂಬ ಕಾರಣಕ್ಕೆ ಆ ರೋಲ್‍ಗೆ ಓಕೆ ಎಂದಿದ್ದ ರಂತೆ ಸತೀಶ್. ಆದರೆ ಮಾಸ್ತಿಗುಡಿ ಚಿತ್ರೀಕರಣ ವೇಳೆ ಉದಯ್ ಮೃತಪಟ್ಟ ನಂತರ ಕಾಣದಂತೆ ಮಾಯವಾದನು ಚಿತ್ರತಂಡದ ಎಲ್ಲ ಪ್ಲಾನ್‍ಗಳೂ ಏರುಪೇರಾಗಿಬಿಟ್ಟವು. ಸತೀಶ್ ಅವರು ಕಾಣದಂತೆ ಮಾಯವಾದನು ಚಿತ್ರಕ್ಕೆ ಡೇಟ್ಸ್ ಅಡ್ಜಸ್ಟ್ ಮಾಡಲು ಆಗಲೇ ಇಲ್ಲ. ಆಗ ಆ ಅವಕಾಶ ಹೋಗಿದ್ದು ಧರ್ಮಣ್ಣ ಬಳಿಗೆ.

ನಾನು ಪಾತ್ರ ಕೇಳಿ ಥ್ರಿಲ್ ಆದೆ. ಆದರೆ ಇದು ಸತೀಶ್ ಅವರು ಮಾಡಬೇಕಿದ್ದ ಪಾತ್ರ ಎಂಬ ಕಾರಣಕ್ಕೆ ಅವರನ್ನೂ ಸಂಪರ್ಕಿಸಿದೆ. ಎಲ್ಲ ಮಾತುಕತೆ ಆಗಿದೆ. ಪಾತ್ರ ಚೆನ್ನಾಗಿದೆ. ನೀವು ಮಾಡಿ. ಡೋಂಟ್ ವರಿ ಎಂದರು.

ರಾಜ್ ಪತ್ತಿಪಾಟಿ ನಿರ್ದೇಶನದ ಚಿತ್ರದಲ್ಲಿ ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ. ಸಿಂಧು ಲೋಕನಾಥ್ ಹೀರೋಯಿನ್. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿದೆ.

 

Shivarjun Movie Gallery

Popcorn Monkey Tiger Movie Gallery