` ಹನುಮ ಜಯಂತಿಯ ಗುಡ್ ಫ್ರೈಡೇಗೆ ರಾಬರ್ಟ್ ಪಕ್ಕಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
roberrt may release between hanman jayanthi and good friday
Roberrt Movie Image

ಏಪ್ರಿಲ್ 8ಕ್ಕೆ ಹನುಮ ಜಯಂತಿ. ಏಪ್ರಿಲ್ 10ಕ್ಕೆ ಗುಡ್ ಫ್ರೈಡೇ. ಆ ಸಂಭ್ರಮಕ್ಕೆ ಕಿಚ್ಚು ಹಚ್ಚುತ್ತಾನಾ ರಾಬರ್ಟ್..? ಹೌದು ಎನ್ನುತ್ತಾರೆ ತರುಣ್ ಸುಧೀರ್. ಅವರಿಗೆ ಅದು ಖುಷಿಯ ವಿಷಯ.

ರಾಬರ್ಟ್ ಚಿತ್ರದ ಪೋಸ್ಟರ್ ಬಂದಿದ್ದು ಕ್ರಿಸ್‍ಮಸ್‍ಗೆ. ಸಂಕ್ರಾಂತಿಗೆ ಬಂದಿದ್ದು ರಾಮನ ಲುಕ್ಕು. ಎಲ್ಲೋ ಒಂದ್ ಕಡೆ ಸಿಂಕ್ ಆಗುತ್ತಿವೆ ಎನ್ನುವ ತರುಣ್ 108 ದಿನಗಳ ಮ್ಯಾರಥಾನ್ ಶೂಟಿಂಗ್ ಮುಗಿಸಿದ್ದಾರೆ.

ಮೈಸೂರು, ಬೆಂಗಳೂರು, ಹೈದರಾಬಾದ್, ಚೆನ್ನೈ, ಪಾಂಡಿಚೆರಿ, ಲಕ್ನೋ, ವಾರಾಣಸಿ ಸೇರಿದಂತೆ ಹಲವಡೆ ಶೂಟಿಂಗ್ ಆಗಿದೆ. ಮುಕ್ಕಾಲು ಚಿತ್ರೀಕರಣ ಸೆಟ್‍ಗಳಲ್ಲಿ ಆಗಿದೆ. 35ಕ್ಕೂ ಹೆಚ್ಚು ಸೆಟ್ ಹಾಕಿಸಿ ಶೂಟ್ ಮಾಡಿದ್ದೇವೆ ಎಂದು ಮಾಹಿತಿ ನೀಡುವ ತರುಣ್, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Shivarjun Trailer Launch Gallery

Popcorn Monkey Tiger Movie Gallery