` ಅಮೆರಿಕಾ ಅಮೆರಿಕಾ ನಟಿ ಹೇಮಾ ಕಾಲಿಗೆ ನಮಸ್ಕರಿಸಿದ್ದ ಡಾ.ರಾಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hema panchamukhi shares her working experience with dr rajkuamr
Hema Panchamukhi Talks About her Working Experience with Dr Rajkumar

ಡಾ.ರಾಜ್ ಕುಮಾರ್ ಎಂದರೆ ಪ್ರತಿಯೊಬ್ಬ ಕಲಾವಿದರೂ ಭಯಭಕ್ತಿಯಿಂದ ನಮಸ್ಕರಿಸುತ್ತಾರೆ. ಅಂತಹ ಕಲಾವಿದ ಅಗ ತಾನೇ ಬೆಳಕಿಗೆ ಬರುತ್ತಿದ್ದ ಕಲಾವಿದೆಯ ಕಾಲಿಗೆ ನಮಸ್ಕರಿಸಿದರು ಎಂದರೆ.. ಇಂಥಾದ್ದೊಂದು ಅನುಭವ ಪಡೆದುಕೊಂಡಿರೋದು ಹೇಮಾ ಪಂಚಮುಖಿ.

`ನಮ್ಮ ಕುಟುಂಬಕ್ಕೂ ರಾಜ್ ಕುಟುಂಬಕ್ಕೂ ಬಹು ಕಾಲದ ಪರಿಚಯ. ನನ್ನ ನೃತ್ಯಾಭ್ಯಾಸದ ಬಗ್ಗೆ ರಾಜ್ ಅವರಿಗೆ ವಿಶೇಷ ಕಾಳಜಿಯೂ ಇತ್ತು. ಹೀಗಾಗಿಯೇ ಜೀವನ ಚೈತ್ರ ಚಿತ್ರದಲ್ಲಿ ನನಗೊಂದು ಪುಟ್ಟ ಪಾತ್ರ ನಿರ್ವಹಿಸಲು ಕೇಳಿದರು. ಚಿತ್ರದಲ್ಲಿ ಬರುವ ನಾದಮಯ ಹಾಡಿನಲ್ಲಿ.. ಡಾ.ರಾಜ್ ಮುಗಿಲಿನಲ್ಲಿ ಕಲ್ಪಿಸಿಕೊಳ್ಳುವ ಸರಸ್ವತಿ ಇದ್ದಾಳಲ್ಲ.. ಅದು ನಾನು. ಮೇಕಪ್ ಹಾಕಿಕೊಂಡು ಬಂದ ನನ್ನನ್ನು ನೋಡಿ ರಾಜ್‍ಕುಮಾರ್ ತಕ್ಷಣ ನನ್ನ ಕಾಲುಮುಟ್ಟಿ ನಮಸ್ಕರಿಸಿದರು. ನಾನು ನಡುಗಿ ಹೋಗಿದ್ದೆ. ತಕ್ಷಣ ನಾನೂ ಅವರ ಕಾಲುಮುಟ್ಟಿ ನಮಸ್ಕರಿಸಿದೆ' ಎಂದು ನೆನಪಿಸಿಕೊಂಡಿದ್ದಾರೆ ಹೇಮಾ.

ಅದಕ್ಕೆ ಕಾರಣವಾಗಿದ್ದುದು ಇಷ್ಟೆ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಡಾ.ರಾಜ್ ಕುಮಾರ್ ಕಣ್ಣಿಗೆ ಹೇಮಾ ಪಂಚಮುಖಿ ಸಾಕ್ಷಾತ್ ಸರಸ್ವತಿಯೇ ಆಗಿ ಕಂಡಿದ್ದಾರೆ. ಆದರೆ, ತಿರುಗಿ ತಮ್ಮ ಕಾಲಿಗೆ ನಮಸ್ಕರಿಸಿದ ಹೇಮಾರನ್ನು ರಾಜ್ ಹಾಗೆಲ್ಲ ನನ್ನ ಕಾಲಿಗೆ ನಮಸ್ಕರಿಸಬಾರದು. ನೀನು ಸರಸ್ವತಿ ಎಂದಿದ್ದರಂತೆ.

ಇಂಥದ್ದೇ ಅನುಭವ ಕವಿರತ್ನ ಕಾಳಿದಾಸ ಚಿತ್ರದಲ್ಲೂ ಎದುರಾಗಿತ್ತು. ಆ ಚಿತ್ರದಲ್ಲಿ ಬರುವ ಕಾಳಿಕಾದೇವಿಗೆ ರಾಜ್ ಪಾದಮುಟ್ಟಿ ನಮಸ್ಕರಿಸುವ ದೃಶ್ಯ ಇದೆಯಲ್ಲ, ಆ ದೃಶ್ಯವನ್ನು ಮಾಡಿದ್ದ ಕಲಾವಿದೆಯ ಹೆಸರು ನಳಿನಿ. ರಾಜ್ ತಮ್ಮ ಮಗಳ ಕಾಲಿಗೆ ನಮಸ್ಕರಿಸುವ ದೃಶ್ಯ ಬೇಡವೇ ಬೇಡ ಎಂದು ನಳಿನಿಯ ತಂದೆ ತಾಯಿ ಹಠ ಹಿಡಿದಿದ್ದರಂತೆ. ಆಕೆಯ ಪಾದಕ್ಕೆ ನಮಸ್ಕರಿಸುವುದು ರಾಜಕುಮಾರ ಅಲ್ಲ, ಕಾಳಿದಾಸ. ಆಕೆ ನಳಿನಿಯೂ ಅಲ್ಲ, ಕಾಳಿಮಾತೆ ಎಂದು ನಳಿನಿ ಹೆತ್ತವರನ್ನು ಸಮಾಧಾನಿಸಿದ್ದರಂತೆ ಡಾ.ರಾಜ್. ಅಂತಹುದೇ ಅನುಭವವನ್ನು ಹೇಮಾ ಪಂಚಮುಖಿ ಹಂಚಿಕೊಂಡಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery