ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಳ್ಳಾರಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ, ನಾಯಕಿ ಶ್ರೀನಿಧಿಯ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿಗಳಿವೆ.
ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಕೂಡಾ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ನಡೆದಿತ್ತು. ಅರಮನೆಯಲ್ಲಿ ಚಿತ್ರದ ಅತ್ಯಂತ ಪ್ರಮುಖ ಭಾಗಗಳ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್, 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.