` ಸಂಗೀತ ಬಿಟ್ಟು, ನಟನೆ ಹಿಂದೆ ಬಿದ್ದಿರೋದೇಕೆ ಸಾಧು ಕೋಕಿಲ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sadhu kokila reveals hard truth about film industry
Sadhu Kokila image

ಸಾಧು ಕೋಕಿಲ, ಕನ್ನಡ ಚಿತ್ರರಸಿಕರಿಗೆ ಹಾಸ್ಯನಟರಾಗಿ ಚಿರಪರಿಚಿತ ಮುಖ. ಜಾನಿ ಲಿವರ್ ನೆನಪಿಸುವ ಸಾಧು, ಅದ್ಭುತ ಸಂಗೀತ ನಿರ್ದೇಶಕರೂ ಹೌದು. ಒಳ್ಳೆಯ ಗಾಯಕರೂ ಹೌದು. ದೇಶದ ಕೆಲವೇ ಕೆಲವು ಬೆಸ್ಟ್ ಮ್ಯೂಸಿಕಲ್ ಕೀಬೋರ್ಡ್ ಪ್ಲೇಯರುಗಳಲ್ಲಿ ಸಾಧು ಒಬ್ಬರು. ನಿರ್ದೇಶಕರಾಗಿಯೂ ಹೆಸರು ಮಾಡಿರುವ ಸಾಧು, ಸಂಗೀತ ನೀಡಿರುವ ಹಲವು ಚಿತ್ರಗಳು ಮ್ಯೂಸಿಕಲಿ ಹಿಟ್ ಆಗಿವೆ.

ಶ್, ನಂ.1, ಮೆಜೆಸ್ಟಿಕ್, ಕಾವ್ಯ, ಗಂಡುಗಲಿ, ಹೆಚ್2ಒ, ಲಾಲಿಹಾಡು, ರಕ್ತಕಣ್ಣೀರು, ದಾಸ, ರಾಕ್ಷಸ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ಮಾಸ್ತಿಗುಡಿ.. ಹೀಗೆ ಹಲವಾರು ಚಿತ್ರಗಳಿವೆ. ಹಿನ್ನೆಲೆ ಸಂಗೀತದಲ್ಲಿ ಇವತ್ತಿಗೂ ಇವರೇ ಮಾಸ್ಟರ್. ಸಂಗೀತಕ್ಕೆ ಎರಡೆರಡು ಬಾರಿ ರಾಜ್ಯಪ್ರಶಸ್ತಿ ಪಡೆದಿರೋ ಸಾಧು, ಸಂಗೀತ ಬಿಟ್ಟು ನಟನಾಗಿಯೇ ಹೆಚ್ಚು ತೊಡಗಿಸಿಕೊಳ್ಳೋದೇಕೆ..? ಈ ಪ್ರಶ್ನೆಗೆ ಸಾಧು ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ.

ಸಂಗೀತ ನೀಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ ನಿಜ. ಆದರೆ, ಅಲ್ಲಿ ದುಡ್ಡಿಲ್ಲ. ಹೆಸರು ಸಿಗುತ್ತೆ. ಮನಸ್ಸಿಗೆ ತೃಪ್ತಿ ಸಿಗುತ್ತೆ. ದುಡ್ಡು ಸಿಗುವುದು ನಟನೆಯಲ್ಲಿ. ಜೀವನಕ್ಕಾಗಿ ನಟಿಸುತ್ತೇನೆ. ತೃಪ್ತಿಗಾಗಿ ಆಗಾಗ್ಗೆ ಸಂಗೀತ ನಿರ್ದೇಶನ ಮಾಡುತ್ತೇನೆ' ಎಂದಿದ್ದಾರೆ ಸಾಧು.

Shivarjun Movie Gallery

KFCC 75Years Celebrations and Logo Launch Gallery