` ಅಜೇಯ್ ರಾವ್ ಹುಟ್ಟುಹಬ್ಬಕ್ಕೆ ಶೋಕಿವಾಲನ ಗಿಫ್ಟು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shokilawala teaser is a gift to ajai rao's birthday
Shokilawala Movie Image

ಅಜೇಯ್ ರಾವ್ ನಟಿಸಿರುವ ಹೊಸ ಚಿತ್ರ ಶೋಕಿವಾಲ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರ, ಅಜೇಯ್ ರಾವ್ ಹುಟ್ಟುಹಬ್ಬಕ್ಕೆ ಬೊಂಬಾಟ್ ಗಿಫ್ಟ್ ಕೊಟ್ಟಿದೆ. ಅಭಿಮಾನಿಗಳು ಥ್ರಿಲ್ಲಾಗುವಂತೆ ಟೀಸರ್ ಕೊಟ್ಟಿದೆ.

ನಿನ್ ಮಗನ್ ಬಗ್ಗೆ ಹೇಳಮ್ಮ ಅನ್ನೋ ಡೈಲಾಗ್‍ನಿಂದ ಶುರುವಾಗುತ್ತೆ ಟೀಸರ್. ಅವ್ನ್ ಬಗ್ಗೆ ಒಂದ್ ಫೋಟೋದಾಗೆ ಹೇಳಕ್ ಆಗಲ್ಲ ಸರ್, ಒಂದ್ ಆಲ್ಬಮ್ಮೇ ಬೇಕು. ಅವ್ನು ಸಪರೇಟು ಸರ್ ಅನ್ನೋ ಪಂಚ್ ಬೆನ್ನಲ್ಲೇ ಬರುತ್ತೆ.

ಹಾರ ಬಿದ್ಮೇಲೆ ಚಪ್ಪಾಳೆನೂ ಬೀಳುತ್ತೆ. ಶಿಳ್ಳೆನೂ ಬೀಳುತ್ತೆ. ಟೈಂ ಚೇಂಜ್ ಆಯ್ತು ಗುರೂ.. ಇನ್ಮೇಲೆ ಈ ಶೋಕಿವಾಲನ ಆಟ ಶುರು.. ಡೌಟಾ.. ನೋಡೇ ಬಿಡುವಾ.. ಅಂತಾರೆ ಅಜೇಯ್.

ಬಿ.ತಿಮ್ಮೇಗೌಡ ಅಲಿಯಾಸ್ ಜಾಕಿ ನಿರ್ದೇಶನದ ಚಿತ್ರದಲ್ಲಿ ಅಜೇಯ್ ರಾವ್ ಎದುರು ಸಂಜನಾ ಆನಂದ್ ನಾಯಕಿ.

Shivarjun Movie Gallery

KFCC 75Years Celebrations and Logo Launch Gallery