` ಮತ್ತೆ ಉದ್ಭವ ಹೀರೋಗೂ ದರ್ಶನ್ ಕಂಡರೆ ಲವ್ ಜಾಸ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the kid during kariya movie release is hero now
Actor Pramod

ಮತ್ತೆ ಉದ್ಭವ ಚಿತ್ರದ ಹೀರೋ ಪ್ರಮೋದ್. ಈ ಪ್ರಮೋದ್‍ಗೆ ದರ್ಶನ್ ಕಂಡರೆ ಸ್ವಲ್ಪ ಪ್ರೀತಿ ಜಾಸ್ತಿ. ಕಾರಣ, ಅವರೂ.. ಇವರೂ ಒಂದೇ ಊರಿನವರು.

`ಕರಿಯ ರಿಲೀಸ್ ಆದಾಗ ನನಗೆ 7 ವರ್ಷ. ಆ ಚಿತ್ರದ ಹಾಡುಗಳನ್ನು ರೊಚ್ಚಿಗೆದ್ದು ಕೇಳಿದ್ದೆ. ನಮ್ಮೂರಿನಲ್ಲಿ ದರ್ಶನ್ ಅವರನ್ನು ಕರೆಸಿ ಸನ್ಮಾನ ಮಾಡಿದ್ದರು. ದೂರದಿಂದ ನಿಂತು ನೋಡಿದ್ದೆ. ಈಗ ಅವರು ನನ್ನ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ ಎನ್ನುವುದೇ ಖುಷಿ' ಎಂದು ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

ದರ್ಶನ್ ತುಂಬಾ ಸಿಂಪಲ್ ಮನುಷ್ಯ. ಅವರ ಮನೆಗೆ ಹೊದರೆ ಊಟ ಮಾಡಿಸದೆ ಕಳಿಸೋದಿಲ್ಲ ಎನ್ನುವ ಪ್ರಮೋದ್ ಮತ್ತೆ ಉದ್ಭವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಮತ್ತೆ ಉದ್ಭವ ಚಿತ್ರದಲ್ಲಿ ಮಿಲನ ನಾಗರಾಜ್, ರಂಗಾಯಣ ರಘು ನಟಿಸಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery