` ಕಲಿ ಪ್ರೇಮ್ ಚಿತ್ರದಲ್ಲಿ ಮಂಗಳೂರು ಬಾಂಬರ್ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jogi prem's next film titled i am khalki
Jogi Prem

ಮಂಗಳೂರು ಏರ್‍ಪೋರ್ಟ್ ಬಾಂಬ್ ಘಟನೆ ನಡೆದು ವಾರವೂ ಕಳೆದಿಲ್ಲ. ಅರೆಸ್ಟ್ ಆಗಿರುವ ಆದಿತ್ಯ ರಾವ್ ಕುರಿತಂತೆ ಒಂದು ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಆದರೆ, ಸ್ಯಾಂಡಲ್‍ವುಡ್ ಅದೆಷ್ಟು ಫಾಸ್ಟ್ ಆಗಿದೆ ಅಂದ್ರೆ, ಹೊಸ ಚಿತ್ರದಲ್ಲಿ ಬಾಂಬರ್ ಕಥೆಯೊಂದು ಎಂಟ್ರಿ ಕೊಟ್ಟಿದೆ. ಚಿತ್ರದ ಹೆಸರು ಐ ಆ್ಯಮ್ ಕಲ್ಕಿ.

ಐ ಆ್ಯಮ್ ಕಲ್ಕಿ ಚಿತ್ರಕ್ಕೆ ಜೋಗಿ ಪ್ರೇಮ್ ಹೀರೋ. ಪ್ರೇಮ್ ಅವರೇ ನಿರ್ದೇಶಿಸಬೇಕಿದ್ದ ಶಿವಣ್ಣ-ಸುದೀಪ್ ಕಾಂಬಿನೇಷನ್ನಿನ ಕಲಿ ಚಿತ್ರ ನೆನಪಾಗಬಹುದು. ಆದರೆ, ಇದು ಅದಲ್ಲ. ಈ ಚಿತ್ರಕ್ಕೆ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್. ಅಷ್ಟೇ ಅಲ್ಲ, ಅವರೇ ಆದಿತ್ಯ ರಾವ್ ಕ್ಯಾರೆಕ್ಟರ್ ಮಾಡುವ ಸಾಧ್ಯತೆ ಇದೆಯಂತೆ.

ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಐ ಆ್ಯಮ್ ಕಲ್ಕಿ ಚಿತ್ರಕ್ಕೆ ಆನೆ ಪಟಾಕಿ ಎಂಬ ಚಿತ್ರ ನಿರ್ಮಿಸಿದ್ದ ಸುರೇಶ್ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery