` ಪ್ರವಾಹ ಪೀಡಿತ ಗ್ರಾಮ ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರ ತಂಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
3rd class movie team adopts flood affected ares in bagalkote
3rd Class Movie Team

ಇದೇ ತಿಂಗಳು ರಿಲೀಸ್ ಆಗುತ್ತಿರುವ ಚಿತ್ರ ಥರ್ಡ್ ಕ್ಲಾಸ್ ಒಂದು ಕಡೆ ಸಿನಿಮಾ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಸಿನಿಮಾ ತಂಡ ಬಾಗಲಕೋಟೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ. ಇದು ಕಳೆದ ವರ್ಷದ ರಣಭೀಕರ ಪ್ರವಾಹದಲ್ಲಿ ನಲುಗಿರುವ ಗ್ರಾಮ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಮಲಪ್ರಭೆಯ ಕೋಪಕ್ಕೆ ನಲುಗಿದ್ದ ಗ್ರಾಮದಲ್ಲಿ ಥರ್ಡ್ ಕ್ಲಾಸ್ ಚಿತ್ರ ತಂಡ ಗ್ರಾಮ ವಾಸ್ತವ್ಯ ಮಾಡಿದೆ. ಚಿತ್ರದ ಹೀರೋ ಜಗದೀಶ್, ನಾಯಕಿ ರೂಪಿಕಾ ಊರಿನಲ್ಲಿ ಗ್ರಾಮಸ್ಥರ ಜೊತೆ ರಾತ್ರಿಯಿಡೀ ಕಳೆದು ಖುಷಿ ಹಂಚಿದ್ದಾರೆ.

ಸಿನಿಮಾ ಪ್ರಮೋಷನ್ ಎಂದರೆ ಸುದ್ದಿಗೋಷ್ಟಿ, ದೊಡ್ಡ ದೊಡ್ಡ ಕಾರ್ಯಕ್ರಮ ಎನ್ನುತ್ತಿರುವವರ ಮಧ್ಯೆ ಒಂದು ಜನ ಮೆಚ್ಚುವ ಕೆಲಸದ ಮೂಲಕ ಪ್ರಚಾರ ಮಾಡುತ್ತಿದೆ ಥರ್ಡ್ ಕ್ಲಾಸ್ ಸಿನಿಮಾ ಟೀಂ.

 

Shivarjun Trailer Launch Gallery

Popcorn Monkey Tiger Movie Gallery