ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗದ ಟೀಸರ್ ರಿಲೀಸ್ ಆಗಿದೆ. ದುನಿಯಾ ವಿಜಿ ಹುಟ್ಟುಹಬ್ಬಕ್ಕೆ ಚಿತ್ರತಂಡ ನೀಡಿರುವ ಕಾಣಿಕೆ ಇದು. ಟೀಸರ್‍ನಲ್ಲಿ ಅಬ್ಬಿರಿಸಿರುವುದು ರೌಡಿಸಂ. ರೌಡಿಸಂ ಚಿತ್ರಕ್ಕೆ ಓಂಕಾರ ಬರೆದ ಉಪೇಂದ್ರ ಅವರೇ ಟೀಸರ್ ರಿಲೀಸ್ ಮಾಡಿದ್ದು ಸ್ಪೆಷಲ್ಲು.
ಡಾಲಿ ಧನಂಜಯ್ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿದ್ದರೆ, ರೌಡಿ ಸಲಗನಾಗಿ ವಿಜಿ, ತಣ್ಣಗೆ ಅಬ್ಬರಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿರೋ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ದೇಶಕ. ಬಹುತೇಕ ಟಗರು ಚಿತ್ರತಂಡ ಸಲಗ ಚಿತ್ರಕ್ಕೆ ಕೆಲಸ ಮಾಡಿದೆ. ಅಂದಹಾಗೆ ಸಲಗ ಚಿತ್ರಕ್ಕೆ ಟ್ಯಾಗ್‍ಲೈನ್ ನಡೆದದ್ದೇ ದಾರಿ.