` ದೆವ್ವ.. ಲವ್ವು.. ದ್ವೇಷ.. ಕಾಣದಂತೆ ಮಾಯವಾದನು ಕಾಮಿಡಿನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Kanadanthe Mayavadanu image
Vikas, Sindhu Lokanath in Kanadanthe Mayavadanu movie

ಕಾಣದಂತೆ ಮಾಯವಾದನು ಚಿತ್ರದಲ್ಲೇನಿದೆ..? ಜಯಮ್ಮನ ಮಗ ಡೈರೆಕ್ಟರ್ ವಿಕಾಸ್ ಹೀರೋ ಆಗಿರುವ ಚಿತ್ರ ಕಾಣದಂತೆ ಮಾಯವಾದನು. ಸಿಂಧು ಲೋಕನಾಥ್ ಹೀರೋಯಿನ್. ಈ ಚಿತ್ರದಲ್ಲಿ ದೆವ್ವಗಳಿವೆಯಂತೆ.

ಹೌದು, ದ್ವೇಷ ತೀರಿಸಿಕೊಳ್ಳಲು ಹೊರಡುವ ದೆವ್ವಕ್ಕೆ ಶಕ್ತಿಯೇ ನಶಿಸಿಹೋಗುತ್ತೆ. ಶತ್ರುವೂ ಕೂಡಾ ದೆವ್ವ. ಹಾಗಾದರೆ, ಇದು ದೆವ್ವಗಳ ಹೊಡೆದಾಟದ ಸಿನಿಮಾನಾ..? ವೇಯ್ಟ್.. ಚಿತ್ರದಲ್ಲೊಂದು ಕ್ಯೂಟ್ ಲವ್ ಸ್ಟೋರಿಯಿದೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಾಮಿಡಿಯೂ ಇದೆ. ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆ. ಹಾಗಾದರೆ ಥಿಯೇಟರಿಗೆ ಬಂದವರು ನಗು ನಗುತ್ತಾ ಬರುತ್ತಾರೋ.. ಹೆದರುತ್ತಾ ಕೂರುತ್ತಾರೋ..

ರಿಲೀಸ್ ಡೇಟ್ ಹತ್ತಿರದಲ್ಲಿರೋವಾಗ ಸ್ವಲ್ಪ ದಿನ ತಾಳಿ ಅಂತಾರೆ ವಿಕಾಸ್. ಜನವರಿ 31ರಂದು ರಿಲೀಸ್ ಆಗ್ತಿರೋ ಚಿತ್ರಕ್ಕೆ ಈಗಾಗಲೇ ಪರಭಾಷೆಯಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery