` ಮತ್ತೆ ಉದ್ಭವಕ್ಕೆ ದರ್ಶನ್ ಬಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Matte Udbhava Image
Milana Nagaraj, Pramod in Mathe Udbhava

ಕೋಡ್ಲು ರಾಮಕೃಷ್ಣ ನಿರ್ದೇಶನದ ಮತ್ತೆ ಉದ್ಭವ ಚಿತ್ರಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ಸಪೋರ್ಟ್ ಸಿಕ್ಕಿದೆ. 20ನೇ ತಾರೀಕು ಮತ್ತೆ ಉದ್ಭವ ಟ್ರೇಲರ್ ರಿಲೀಸ್ ಆಗುತ್ತಿದ್ದು, ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ದರ್ಶನ್.

ದರ್ಶನ್ ಒಬ್ಬರೇ ಅಲ್ಲ, ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಕೂಡಾ ಕಾರ್ಯಕ್ರಮದ ಮುಖ್ಯ ಅತಿಥಿ. ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮವಿದೆ.

ದಶಕಗಳ ಹಿಂದೆ ಅನಂತ್ ನಾಗ್ ಅಭಿನಯದಲ್ಲಿ ರಿಲೀಸ್ ಆಗಿದ್ದ ಉದ್ಭವ ಚಿತ್ರದ ಸೀಕ್ವೆಲ್ ಇದು. ಅಂದು ಅನಂತ್ ನಾಗ್ ಮಾಡಿದ್ದ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಪ್ರಮೋದ್ ಮತ್ತು ಮಿಲನ ನಾಗರಾಜ್ ನಾಯಕ, ನಾಯಕಿಯರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery